ಬಂಟ್ವಾಳ: ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು, ಬಂಟ್ವಾಳ ತಾಲೂಕಿನ ನರಿಕೊಂಬು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂಟೈನ್ಮೆಂಟ್ ಪ್ರದೇಶದ ಇನ್ಸಿಡೆಂಟ್ ಅಧಿಕಾರಿಯಾಗಿರುವ ಅವರು ಭೇಟಿ ನೀಡಿದ ಸಂದರ್ಭ, ಪ್ರದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ 75 ವರ್ಷದ ವೃದ್ಧ ಹಾಗೂ 4 ವರ್ಷದ ಮಗುವನ್ನು ಆಸ್ಪತ್ರೆಗೆ ಕಳುಹಿಸಲು ನೆರವಾದರು. ಬಳಿಕ ಗ್ರಾಪಂ ಕಚೇರಿಯಲ್ಲಿ ಅಧಿಕಾರಿಗಳ ಮಟ್ಟದ ಸಭೆ ನಡೆಸಿದರು. ಈ ಸಂದರ್ಭ ನರಿಕೊಂಬು ಪಿಡಿಒ ಶಿವಪ್ಪ ಜನಕೊಂಡ ಉಪಸ್ಥಿತರಿದ್ದರು.
ಪ್ರಕರಣದ ಸುತ್ತಲಿನ 360 ಡಿಗ್ರೀವರೆಗೆ 500 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದೆ. ಆದುದರಿಂದ ಅಲ್ಲಿಯ ನಿವಾಸಿಗಳಿಗೆ ದಿನನಿತ್ಯದ ಗೃಹಬಳಕೆಯ ದಿನಸಿ,ತರಕಾರಿ,ಹಾಲು,ಔಷಧಿ,ಇತರೆ ಅವಶ್ಯಕ ವಸ್ತುಗಳನ್ನು ಮನೆಗೆ ತಲುಪಿಸಲು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹೇಳಿದೆ.
Be the first to comment on "ನರಿಕೊಂಬು ಪ್ರದೇಶಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ಭೇಟಿ, ಪರಿಶೀಲನೆ"