ಇವರು ಕೊರೊನಾದಲ್ಲೂ ಚಿನ್ನ ಖರೀದಿಸಿ ಎನ್ನುತ್ತಿಲ್ಲ. ಲಾಕ್ ಡೌನ್ ನಿಂದ ಚಿನ್ನದಂಗಡಿ ಬಂದ್ ಆಗಿರುವಾಗ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಬಗ್ಗೆಯೇ ಆಲೋಚನೆಗಳು ನಡೆಯುತ್ತಿದ್ದರೆ, ಇಲ್ಲೊಬ್ಬರು ಜನರ ಸಂಕಷ್ಟಕ್ಕೆ ನೆರವಾಗಿ ಎನ್ನುವ ಮೂಲಕ ವಿಭಿನ್ನ ಪ್ರಯತ್ನ ನಡೆಸುತ್ತಿದ್ದಾರೆ.
ಬಿ.ಸಿ.ರೋಡಿನ ಅಪೂರ್ವ ಜ್ಯುವೆಲರ್ಸ್ ಮಾಲೀಕ ಸುನೀಲ್ ಬಿ. ಅವರು ಕೊರೊನಾ ಲಾಕ್ ಡೌನ್ ಸಂದರ್ಭ ತನ್ನ ಫೇಸ್ ಬುಕ್ ಮೂಲಕ ಜನರಿಗೆ ಹೊಸ ಟಾಸ್ಕ್ ನೀಡಿದ್ದು, ಅದೇನೆಂದರೆ ಜನರ ಸಂಕಷ್ಟಕ್ಕೆ ನೆರವಾಗಿ ಚಿನ್ನದ ನಾಣ್ಯ ಗೆಲ್ಲಿ. ಇದಕ್ಕೆ ಅವರಿಗೆ ಅಪೂರ್ವ ಬೆಂಬಲವೂ ದೊರಕಿದೆ. ಹಲವಾರು ಮಂದಿ ಉತ್ತಮ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ. ಅಕ್ಷಯ ತೃತೀಯ ದ 6 ದಿನಗಳ ಬಳಿಕ ಅಷ್ಟೂ ದಾನಿಗಳ ಹೆಸರಲ್ಲಿ ಒಬ್ಬರನ್ನು ಅದೃಷ್ಟ ಚೀಟಿಯ ಮೂಲಕ ಆರಿಸಿ, ಅವರನ್ನು ಲಾಕ್ ಡೌನ್ ಮುಗಿದ ಬಳಿಕ ಅಪೂರ್ವ ಮಳಿಗೆಯಲ್ಲಿ ಚಿನ್ನದ ನಾಣ್ಯ ನೀಡಿ ಗೌರವಿಸಲಾಗುವುದು ಎಂದು ಘೋಷಿಸಿದ್ದಾರೆ. ಕೊರೋನಾ ಸಂಕಷ್ಟದ ಕಾಲದಲ್ಲಿ ಅಕ್ಷಯ ತೃತೀಯದ ಅಂಗವಾಗಿ ಘೋಷಿಸಿರುವ ನೆರವು ಯೋಜನೆಗೆ ಗ್ರಾಹಕರಿಂದ ಅಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಸುನಿಲ್ ಬಿ. ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅವರು ವೈಯಕ್ತಿಕವಾಗಿ ಪೊಲೀಸ್, ಹೋಂ ಗಾರ್ಡ್ ಸಹಿತ ಕೊರೊನಾ ಸಂದರ್ಭ ಬೀದಿಗಿಳಿದು ಜಾಗೃತಿ ಮೂಡಿಸುವವರಿಗೆ ಪ್ರಚಾರವನ್ನು ಬಯಸದೆ ನೆರವಾಗುತ್ತಿದ್ದಾರೆ.
- Facebook ನಲ್ಲಿ ಅವರು ಬರೆದದ್ದು ಹೀಗೆ.
ಅಕ್ಷಯ ತೃತೀಯ..
ವೇದ ಪುರಾಣಗಳ ಪ್ರಕಾರ ಇದು ಒಂದು ವಿಶೇಷ ದಿನ.
ಯಾವುದೇ ಶುಭ ಕಾರ್ಯ ಪ್ರಾರಂಭಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ. ಹೀಗಾಗಿಯೇ ಹೊಸ ಕೆಲಸ ಪ್ರಾರಂಭ ಮಾಡಲು, ಚಿನ್ನಾಭರಣ ಖರೀದಿ ಮಾಡಲು ಇದು ಶುಭಕರವಾದ ದಿನ. ಆದರೆ ಈ ವರುಷ ಇಡೀ ಜಗತ್ತೇ ಅತೀ ದೊಡ್ಡ ಜೈವಿಕ ಯುದ್ದವೊಂದನ್ನು ಎದುರಿಸುತ್ತಿದೆ. ಕೊರೋನಾ ವೈರಸ್ ವಿರುಧ್ದ ಸಮರ ಸಾರಿದೆ.
ಇಂತಹ ಸಂಕಷ್ಟದ ಸಮಯದಲ್ಲಿ ಈ ಭಾರಿಯ ಅಕ್ಷಯ ತೃತೀಯವನ್ನು ಮತ್ತಷ್ಟು ಅರ್ಥ ಪೂರ್ಣ ಗೊಳಿಸೋಣವೇ.. ಬನ್ನಿ ಅಪೂರ್ವ ದೊಂದಿಗೆ ಕೈ ಜೋಡಿಸಿ. ಈ ವರುಷ ಅಕ್ಷಯ ತೃತೀಯದಂದು ನೀವು ಚಿನ್ನ ಖರೀದಿಸಲು ಯೋಜನೆ ಮಾಡಿಟ್ಟಿದ್ದಲ್ಲಿ ಅದನ್ನು ಸದ್ಯಕ್ಕೆ ಮುಂದೂಡಿ
ಅದರ ಬದಲು ಖರೀದಿಸಲು ನಿಗದಿ ಮಾಡಿರುವ ಮೊತ್ತದ ಕನಿಷ್ಟ 1% ನಗದನ್ನು ನಿಮ್ಮ ಸಮೀಪದ ಯಾವುದಾದರೂ ಒಂದು ತುಂಬಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಮಾಡಿ. ನಂತರ ವಿವರಗಳನ್ನು 7022183304 ಈ WhatsApp ನಂಬರ್ ಗೆ ಕಳುಹಿಸಿ ಕೊಡಿ. (ದಯವಿಟ್ಟು ಸಹಾಯ ಸ್ವೀಕರಿಸಿದವರ photo share ಮಾಡದಿರಿ) ಅಕ್ಷಯ ತೃತೀಯ ದ 6 ದಿನಗಳ ಬಳಿಕ ಅಷ್ಟೂ ದಾನಿಗಳ ಹೆಸರಲ್ಲಿ ಒಬ್ಬರನ್ನ Lucky Draw ಮೂಲಕ ಗುರುತಿಸಲಾಗುವುದು. ವಿಜೇತರನ್ನು lockdown ಮುಗಿದಬಳಿಕ ನಮ್ಮ ಮಳಿಗೆಯಲ್ಲಿ ಚಿನ್ನದ ನಾಣ್ಯ ನೀಡಿ ಗೌರವಿಸಲಾಗುವುದು. ಬನ್ನಿ ಈ ಭಾರಿಯ ಅಕ್ಷಯ ತೃತೀಯದಂದು ಶುಭ ಕಾರ್ಯಕ್ಕೆ ನಾಂದಿ ಹಾಡೋಣ.ನಿಮಗೆಲ್ಲರಿಗೂ ಅಕ್ಷಯ ತೃತೀಯ ದ ಶುಭಾಶಯಗಳು. STAY HOME # STAY SAFE
Be the first to comment on "ಕೊರೋನಾ ಸಂಕಷ್ಟಕ್ಕೆ ನೆರವಾಗಿ, ಚಿನ್ನ ಗೆಲ್ಲಿ ಎಂದ ಸ್ವರ್ಣೋದ್ಯಮಿ"