- ಎಲ್ಲ ಮಾಹಿತಿ ಗೌಪ್ಯ – ಡಿಸಿ ಸ್ಪಷ್ಟನೆ
ಕರೋನಾ ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿ ಕುಟುಂಬದ ಹಿತರಕ್ಷಣೆ ಸಲುವಾಗಿ ಆರೋಗ್ಯ ಇಲಾಖೆಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ, ಎಲ್ಲ ಮಾಹಿತಿಗಳನ್ನು ಅತ್ಯಂತ ಗೌಪ್ಯವಾಗಿಡಲಾಗುವುದು, ಯಾವುದೇ ದಾಖಲೆಗಳನ್ನು ತಮ್ಮಿಂದ ಪಡೆಯಲಾಗುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸರ್ವೆ ಕಾರ್ಯ ಆರಂಭಿಸಿದ್ದು, ತಮ್ಮ ಮನೆಗೆ ಬಂದು ಯಜಮಾನನ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮಾಹಿತಿ ಪಡೆಯಲಿದ್ದು, ಮನೆಯ ಕುಟುಂಬದ ಸದಸ್ಯರಲ್ಲಿ ಜ್ವರ, ಗಂಟಲುನೋವು, ಅಸ್ತಮಾ ಇತ್ಯಾದಿಗಳು ಇದ್ದಲ್ಲಿ ಇವರ ಮಾಹಿತಿಯನ್ನೂ ಪಡೆಯಲಿದ್ದಾರೆ. ಕುಟುಂಬದ ವಯಸ್ಕರ (60 ವರ್ಷ ಮೇಲ್ಪಟ್ಟ) ಸಂಖ್ಯೆ, ಬಿಪಿ, ಸಕ್ಕರೆಕಾಯಿಲೆ, ಕಿಡ್ನಿ ವೈಫಲ್ಯ ಸಮಸ್ಯೆ, ಕ್ಯಾನ್ಸರ್ ಇತ್ಯಾದಿ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಮಾಹಿತಿಯು ಪ್ರತಿಯೊಂದು ಕುಟುಂಬದ ಹಿತರಕ್ಷಣೆಯ ಸಲುವಾಗಿದ್ದು, ಎಲ್ಲವನ್ನೂ ಗೌಪ್ಯವಾಗಿಡಲಾಗುವುದು. ಯಾವುದೇ ದಾಖಲೆಗಳನ್ನು ತಮ್ಮಿಂದ ಪಡೆಯುವುದಿಲ್ಲ ಎಂದವರು ತಿಳಿಸಿದ್ದಾರೆ.
Be the first to comment on "ನಿಮ್ಮ ಕುಟುಂಬದ ಹಿತರಕ್ಷಣೆಗಾಗಿ ಆರೋಗ್ಯ ಇಲಾಖೆಯಿಂದ ಮಾಹಿತಿ ಸಂಗ್ರಹ"