ಜಿಲ್ಲಾಡಳಿತ ವಿಧಿಸಿದ್ದ ನಿಷೇಧಾಜ್ಞೆ ಸಂದರ್ಭ ದ್ವಿಚಕ್ರ ಹೊರತುಪಡಿಸಿ, ಖಾಸಗಿ ವಾಹನಗಳ ಪ್ರವೇಶ ಇಲ್ಲ ಎಂಬ ಸೂಚನೆಯ ಹೊರತಾಗಿಯೂ ಕಳೆದೆರಡು ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ವಾಹನಗಳು ಸಂಚರಿಸುತ್ತಿದ್ದವು. ಸಂತೆ ರೀತಿಯ ವ್ಯಾಪಾರವೂ ಆರಂಭಗೊಂಡಿತ್ತು. ಶುಕ್ರವಾರ ಮತ್ತೆ ಕಟ್ಟುನಿಟ್ಟಾದ ಪೊಲೀಸರು ಬಿ.ಸಿ.ರೋಡಿನ ಕೈಕಂಬ, ಮೇಲ್ಕಾರ್, ಕಲ್ಲಡ್ಕ ಸಹಿತ ಆಯಕಟ್ಟಿನ ಪ್ರದೇಶಗಳಲ್ಲಿ ಸಂತೆವ್ಯಾಪಾರ, ಅನಗತ್ಯ ವಾಹನ ಸಂಚಾರಗಳಿಗೆ ಕಡಿವಾಣ ಹಾಕಿದರು.
ನಿಗದಿತ ಅಂಗಡಿಗಳಲ್ಲದೆ ಇತರೆ ಅಂಗಡಿಗಳೂ ತೆರೆದಿರುವುದನ್ನು ಕಂಡು ಅವುಗಳನ್ನು ಮುಚ್ಚಿದರು. ಕೆಲವರು ಬೆಳ್ಳಂಬೆಳಗ್ಗೆ ಪೊಲೀಸರು ಬರುವುದಿಲ್ಲ ಎಂದು ಸುತ್ತಾಡಲು ಹೊರಟರೆ ಅವರನ್ನೂ ಬೆಂಬಿಡದ ಪೊಲೀಸರು ಕೋವಿಡ್ ನ ಪರಿಣಾಮದ ಕುರಿತು ಬುದ್ಧಿವಾದ ಹೇಳಿ, ಮನೆಯೊಳಗಿರುವಂತೆ ಸೂಚನೆ ನೀಡಿದರು. ಹಳ್ಳಿ ಪ್ರದೇಶಗಳಲ್ಲಿ ಮೂರು ನಾಲ್ಕು ಕಿಲೋಮೀಟರ್ ಹಾಲಿಗಾಗಿ ತೆರಳುವವರು, ಡೈರಿಗಳಿಗೆ ಹಾಲು ಕೊಂಡು ಹೋಗುವವರೂ ಇದರಿಂದ ಪರದಾಡಬೇಕಾಯಿತು.
Be the first to comment on "ಬಿಗುವಾದ ಪೊಲೀಸರು: ನಿಷೇಧಾಜ್ಞೆ ಕಟ್ಟುನಿಟ್ಟು ಪಾಲನೆ"