ಕೋವಿಡ್ 19: ಕವಲು ದಾರಿಯಲ್ಲಿ ದಂತ ವೈದ್ಯರು

  • ಡಾ. ಮುರಲೀ ಮೋಹನ ಚೂಂತಾರು, ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು, ಮಂಗಳೂರು

ಜಗತ್ತಿನೆಲ್ಲೆಡೆ ಕೊವಿಡ್-19 ಎಂಬ ಮಹಾಮಾರಿಯ ಅಟ್ಟಹಾಸ ಕಾಡ್ಗಿಚ್ಚಿನಂತೆ ಹರಡುತ್ತಿದೆ. ರೋಗಕ್ಕೆ ಸೂಕ್ತ ಚಿಕಿತ್ಸೆ ಮತ್ತು ಸಂಪೂರ್ಣ ರಕ್ಷಣೆ ನೀಡುವ ಲಸಿಕೆ ಇಲ್ಲದ ಕಾರಣದಿಂದಾಗಿ ರೋಗ ನಿಯಂತ್ರಣಕ್ಕೆ ತರಲು ವೈದ್ಯರು, ಸರ್ಕಾರ ಮತ್ತು ವಿಜ್ಞಾನಿಗಳು ಪರದಾಡುತ್ತಿದ್ದಾರೆ ನಿಟ್ಟಿನಲ್ಲಿ ರೋಗ ತಡೆಗಟ್ಟುವುದು ಮತ್ತು ರೋಗ ಬಾರದಂತೆ ಎಚ್ಚರ ವಹಿಸುವುದೊಂದೇ ನಮಗಿರುವ ದಾರಿಯಾಗಿದೆಮರಣದ ಪ್ರಮಾಣ ರೋಗದಲ್ಲಿ ಶೇಕಡಾ 3 ರಿಂದ 5 ರಷ್ಟು ಇರುವುದರಿಂದ ರೋಗ ಹರಡುತ್ತಿರುವ ವೇಗ ನೋಡಿದಾಗ ದಿಗಿಲು ಹುಟ್ಟಿಸುತ್ತದೆ

ಜಾಹೀರಾತು

ಜನರು ಮನೆಯೊಳಗೇ ಇದ್ದು ವೈರಾಣುವಿಗೆ ತೆರೆದುಕೊಳ್ಳದಿದ್ದಲ್ಲಿ, ರೋಗ ತನ್ನಿಂತಾನೇ ನಿಯಂತ್ರಣಕ್ಕೆ ಬರುತ್ತದೆ. ಇದು ದಿನ ಬೆಳಗಾಗುವುದರಲ್ಲಿ ಆಗುವುದಿಲ್ಲ. ಜನರು ಸಂಯಮದಿಂದ ವರ್ತಿಸಬೇಕು. ಪ್ರತಿಯೊಬ್ಬ ಪ್ರಜೆಯೂ ರೋಗವನ್ನು ಜಯಿಸುವಲ್ಲಿ ವೈದ್ಯರಷ್ಟೇ ಪ್ರಮುಖ ಪಾತ್ರ ವಹಿಸುತ್ತಾರೆ. ತಾಳ್ಮೆ, ಸಂಯಮ ಮತ್ತು ಶಾಂತಿ ರೀತಿಯಲ್ಲಿ ವರ್ತಿಸಿದಲ್ಲಿ ರೋಗ ಖಂಡಿತವಾಗಿಯೂ ನಿಯಂತ್ರಣಕ್ಕೆ ಬರಲು ಸಾಧ್ಯವಿದೆ. ರೋಗದ ವೈರಾಣು ಕೋವಿಡ್-19 ಸೀನಿದಾಗ ಮತ್ತು ಕೆಮ್ಮಿದಾಗ ದೇಹ ದ್ರವ್ಯಗಳ ಮತ್ತು ಕಿರುಹನಿಗಳ ಮುಖಾಂತರ ಹರಡುವ ಹೆಚ್ಚಿನ ಸಾಧ್ಯತೆ ಇದೆ ಎಂದು ನಮಗೆಲ್ಲಾ ತಿಳಿದಿದೆ ಮತ್ತು ಬಾಯಿ, ಮೂಗು ಕಣ್ಣು ಮುಂತಾದವುಗಳನ್ನು ಸ್ಪರ್ಶಿಸಿದಲ್ಲಿ ರೋಗ ಬೇಗ ಹರಡುತ್ತದೆ ಎಂದೂ ತಿಳಿದುಬಂದಿದೆ. ಅತಿ ಹೆಚ್ಚು ರೋಗ ಹರಡುವ ಸಾಧ್ಯತೆ ದಂತವೈಧ್ಯರ ಚಿಕಿತ್ಸೆಯ ಸಂದರ್ಭದಲ್ಲಿ ಎಂದು ಅಂಕಿಅಂಶಗಳಿಂದ ತಿಳಿಸಿದೆದಂತ ಚಿಕಿತ್ಸೆ ಸಮಯದಲ್ಲಿ ಶೇಕಡಾ 95 ರಷ್ಟು ಮಂದಿಗೆ ರೋಗ ಹರಡುವ ಸಾಧ್ಯತೆ ಇರುವುದರಿಂದ ಸರ್ಕಾರವೇ ಎಲ್ಲಾ ದಂತ ಚಿಕಿತ್ಸೆಗಳನ್ನು  ಮುಚ್ಚಲು ನಿರ್ದೇಶನ ನೀಡಿರುತ್ತದೆದೇಶದಾದ್ಯಂತ ಎಲ್ಲಾ ದಂತ ಚಿಕಿತ್ಸಾಲಯದಲ್ಲಿ  ದಂತ ಚಿಕಿತ್ಸೆ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದೆ

ಏಕೆ ಆತಂಕ?

ದಂತ ಚಿಕಿತ್ಸೆಯ ಸಮಯದಲ್ಲಿ ದಂತ ವೈಧ್ಯರು ಹಲ್ಲಿನಲ್ಲಿ ರಂಧ್ರ ಮಾಡಲು ಬಳಸುವ ಏರೋಟರ್ ಹ್ಯಾಂಡ್ ಫೀಸು ಮತ್ತು ತ್ರೀ ವೇ ಸಿರಿಂಜ್ ಎಂಬ ಸಲಕರಣೆಯನ್ನು ಬಳಸುವಾಗ ರೋಗಿಯ ಬಾಯಿಂದ ಅತೀ ಹೆಚ್ಚು ಕಿರುಹನಿಗಳು ಸೃಷ್ಟಿಯಾಗುತ್ತದೆ ಕಿರುಹನಿಗಳಲ್ಲಿ ಲಕ್ಷಾಂತರ ಕೋವಿಡ್೧೯ ವೈರಾಣುಗಳು ಇರುತ್ತದೆ ಕಾರಣದಿಂದ ಶಂಕಿತ ಅಥವಾ ರೋಗ ಲಕ್ಷಣಗಳಿಲ್ಲದ ವೈರಾಣು ಹೊಂದಿರುವ ರೋಗಿಗಳಿಂz, ಬಹಳ ಸುಲಭವಾಗಿ ವೈರಾಣುಗಳು ದಂತ ವೈಧ್ಯರಿಗೆ, ಸಹಾಯಕರಿಗೆ ಮತ್ತು ಇತರ ರೋಗಿಗಳಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಕಾರಣದಿಂದ ದಂತಚಿಕಿತ್ಸೆಯ ಸಂದರ್ಭ ಕೋವಿಡ್೧೯ ವೈರಾಣು ಹರಡುವ ಸಾಧ್ಯತೆಯ ಪ್ರಮಾಣ ಶೇಕಡಾ ೯೦ ಕ್ಕಿಂತಲೂ ಜಾಸ್ತಿ ಇರುತ್ತದೆದಂತ ವೈಧ್ಯರು ರೋಗಿಯ ಬಾಯಿ, ಮೂಗು ಮತ್ತು ಮುಖದ ಸುತ್ತ ಹೆಚ್ಚು ಸ್ಪರ್ಶಿಸುವ ಕಾರಣದಿಂದ ಅತಿ ಹೆಚ್ಚು ರೋಗ ಹರಡುವ ಸಾಧ್ಯತೆ ದಂತ ಚಿಕಿತ್ಸಾಲಯದಲ್ಲಿ ಇರುತ್ತದೆ ಕಾರಣದಿಂದ ದಂತ ವೈದ್ಯರು, ಅವರ ಸಹಾಯಕರು, ಇವರ ರೋಗಿಗಳು ಮತ್ತು ಅವರ ಜೊತೆ ಬಂದವರು ಹಾಗೂ ಸಮಾಜಕ್ಕೆ ಅತೀ ಹೆಚ್ಚು ಅಪಾಯವಿರುತ್ತದೆಸಾಂಕ್ರಾಮಿಕ ರೋಗವಾದ ಕೋವಿಡ್೧೯ ಬಹಳ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದಂತ ವೈಧ್ಯರು ದಂತ ಚಿಕಿತ್ಸಾಲಯವನ್ನು ಅನಿವಾರ್ಯವಾಗಿ ಮುಚ್ಚಬೇಕಾದ ಸಂದಗ್ದತೆಗೆ ಸಿಲುಕಿದ್ದಾರೆಇನ್ನು ತುರ್ತು ಚಿಕಿತ್ಸೆ ನೀಡಲು ಬೇಕಾದ ರಕ್ಷಣಾ ಪರಿಕರಣೆಗಳು ದುಬಾರಿ ಮತ್ತು ಅವುಗಳ ಲಭ್ಯತೆಯ ಕೊರತೆಯಿಂದಾಗಿ ಸುರಕ್ಷಿತವಾಗಿ ತುರ್ತು ಚಿಕಿತ್ಸೆ ನಡಲು ಸಾಧ್ಯವಾಗದ ಸ್ಥಿತಿಯಲ್ಲಿ ಖಾಸಗಿ ದಂತ ವೈಧ್ಯರು ಸಿಲುಕಿದ್ದಾರೆ.

ಜಾಹೀರಾತು

ಯಾವ ಚಿಕಿತ್ಸೆ ಮಾಡಬಾರದು

ಹಲ್ಲು ಶುಚಿಗೊಳಿಸುವುದುಹಲ್ಲು ತುಂಬಿಸುವುದುಬೇರುನಾಳ ಚಿಕಿತ್ಸೆ, ವಕ್ರದಂತ ಚಿಕಿತ್ಸೆ, ಹಲ್ಲಿನ ಸೌಂದರ್ಯವರ್ಧಕ ಚಿಕಿತ್ಸೆಗಳು ಮತ್ತು ಹಲ್ಲು ಕಟ್ಟಿಸುವುದು ಇತ್ಯಾದಿ ಎಲ್ಲಾ ಚಿಕಿತ್ಸೆಗಳು ತುರ್ತು ದಂತ ಚಿಕಿತ್ಸೆ ಸೇವೆಗಳಲ್ಲಿ ಬರುವುದಿಲ್ಲದ ಕಾರಣ ಎಲ್ಲಾ ಚಿಕಿತ್ಸೆಗಳನ್ನು ಮುಂದೂಡಬಹುದಾಗಿದೆ.

ಯಾವ ಚಿಕಿತ್ಸೆ ಮಾಡಬಹುದು.

ಜಾಹೀರಾತು

ಅತಿಯಾದ ಹಲ್ಲುನೋವು ಇದ್ದಾಗ ಅಥವಾ ಹಲ್ಲಿನ ಒಳಗೆ ಕೀವು ತುಂಬಿಕೊಂಡು ಮುಖ ಊದಿಕೊಂಡಾಗ ಬರೀ ಔಷಧಿ ನೀಡಿದಲ್ಲಿ ನೋವು ಶಮನವಾಗದೇ ಇರಬಹುದುಇಂತಹ ಸಂದರ್ಭಗಳಲ್ಲಿ ಹಲ್ಲಿನ ಮುಖಾಂತರ ಯಂತ್ರಗಳ ಮೂಲಕ ಹಲ್ಲಿನ ಒಳಗೆ ರಂಧ್ರ ಕೊರೆದು ಕೀವು ತೆಗೆಯಬೇಕಾದ ಅನಿವಾರ್ಯತೆ ಇರುತ್ತದೆ. ಅಥವಾ ಕೀವು ತುಂಬಿಕೊಂಡು ಮುಖ ಊದಿಕೊಂಡಿದ್ದಲ್ಲಿ ಸಣ್ಣದಾದ ಗಾಯ/ಗೀರು ಮಾಡಿ ಕೀವು ಹೊರಬರುವಂತೆ ಮಾಡಬೇಕಾಗುತ್ತದೆಇಂತಹಾ ಚಿಕಿತ್ಸೆಗಳನ್ನು ತುರ್ತು ದಂತ ಚಿಕಿತ್ಸೆ ಎಂದು ಪರಿಗಣಿಸಿ ಸಾಕಷ್ಟು ಮುಂಜಾಗರೂಕತಾ ಪರಿಕರಗಳಾದ ಕೈಚೀಲ, ಮುಖಕವಚ, ಕನ್ನಡಕ, ತಲೆಕವಚ ಮತ್ತು ಗೌನ್ಗಳನ್ನು ಬಳಸಿ ತಕ್ಷಣವೇ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇರುತ್ತದೆಇದಲ್ಲದೇ ಗರ್ಭಿಣಿಯರು, ಮಧುಮೇಹಿ ರೋಗಿಗಳು ಮತ್ತು ರಕ್ಷಣಾ ವ್ಯವಸ್ಥೆ ಹದಗೆಟ್ಟ ರೋಗಿಗಳಲ್ಲಿ ಕೀವು ತುಂಬಿದ ಹಲ್ಲಿನಿಂದ ಮಾರಣಾಂತಿಕ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆಅಂತಹವರಿಗೂ ತುರ್ತು ಚಿಕಿತ್ಸೆ ಅನಿವಾರ್ಯವಾಗಿರುತ್ತದೆಅದೇ ರೀತಿ ಬಾಯಿಯಲ್ಲಿ ನಿಯಂತ್ರಣಕ್ಕೆ ಬಾರದ ರಕ್ತಸ್ರಾವ, ವಸಡಿನಲ್ಲಿ ರಕ್ತಸ್ತಾವ ಇದ್ದಾಗ ತುರ್ತು ಚಿಕಿತ್ಸೆಯ ಅವಶ್ಯವಿರುತ್ತದೆ.

ಸರ್ಕಾರ ಏನು ಮಾಡಬೇಕು?

ಎಲ್ಲಾ ಖಾಸಗಿ ದಂತ ಚಿಕಿತ್ಸಾಲಯ ಮುಚ್ಚಿದ ಕಾರಣದಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ 24 ಗಂಟೆಗಳ ಕಾಲ ದಂತ ವೈಧ್ಯ್ಯರು ಲಭ್ಯವಿರುವಂತೆ ಮಾಡಬೇಕು.

ಜಾಹೀರಾತು

ಅತೀ ಅಗತ್ಯ ತುರ್ತು ದಂತ ಚಿಕಿತ್ಸೆ ಮಾತ್ರ ಮಾಡಲು ಅನುಮತಿ ನೀಡಬೇಕು.

ಕೋವಿಡ್೧೯ ರೋಗಾಣು ಹರಡುವ ಸಾಧ್ಯತೆ ಹೆಚ್ಚು ಇರುವುದರಿಂದ ಸೂಕ್ತ ರಕ್ಷಣಾ ಪರಿಕರಗಳಾದ ಎನ್೯೫ ಮುಖಕವಚ, ತಲೆಕವಚ, ಗೌನು ಮತ್ತಿತರ ರಕ್ಷಣಾ ಸಲಕರಣೆಗಳನ್ನು ಆದ್ಯತೆ ಮೇರೆಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ದಂತ ಚಿಕಿತ್ಸಾಲಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರಕುವಂತೆ ಮಾಡಬೇಕು.

ಕೆಲವೊಂದು ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ದಂತ ಸಲಕರಣೆಗಳ ಸೌಲಭ್ಯವಿರುವುದಿಲ್ಲಅಂತಹ ನಗರ/ಊರುಗಳಲ್ಲಿ, ಖಾಸಗಿ ದಂತ ಚಿಕಿತ್ಸಾಲಯಗಳನ್ನು ಗುರುತಿಸಿ ತುರ್ತು ಚಿಕಿತ್ಸೆ, ನೀಡಲು ಅನುಮತಿ ನೀಡಬೇಕು ಮತ್ತು ಅದಕ್ಕೆ ಪೂರಕವಾದ ಪರ್ಸನಲ್ ಪ್ರೊಟೆಕ್ಷನ್ ಸಲರಣೆಗಳಾದ ಗ್ಲೌಸ್, ಎನ್.-೯೫ ಮಾಸ್ಕ್ ಗೌನ್ ಮತ್ತಿತರ ಸಲಕರಣೆಗಳನ್ನು ನೀಡಬೇಕುಈಗ ನಮ್ಮ ದೇಶದಲ್ಲಿ  ಕೊರೋನ ಹರಡುತ್ತಿರುವ ಪರಿಯನ್ನು ಗಮನಿಸಿದಾಗ ಕನಿಷ್ಟ ತಿಂಗಳುಗಳ ಕಾಲ ಖಾಸಗಿ ದಂತಚಿಕಿತ್ಸೆಯ ತೆರೆಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಹಿನ್ನಲೆಯಲ್ಲಿ ಸರ್ಕಾರ ದಿಟ್ಟ ನಿರ್ಧಾರವನ್ನು ಈಗಲೇ ತೆಗೆದುಕೊಳ್ಳಬೇಕಾಗಿದೆ.

ಜಾಹೀರಾತು

ಕೊನೆ ಮಾತು

ಇತ್ತೀಚಿನ ದಿನಗಳಲ್ಲಿ ದಂತ ಚಿಕಿತ್ಸೆ ಎನ್ನುವುದು ಹೆಚ್ಚು ಸೌಂಧರ್ಯವರ್ಧಕ ಚಿಕಿತ್ಸೆ ಎಂದು ಬದಲಾಗಿರುವುದು ನಿಜವಾದ ಮಾತು.   ಆದರೂ ಶೇಕಡಾ 20ರಷ್ಟು ಚಿಕಿತ್ಸೆಗಳು ರೋಗಿಯ ನೋವು ನಿವಾರಣೆ, ಹಲ್ಲು ಕೀಳಿಸುವುದು ಮತ್ತು ಕೀವು ತೆಗೆಯುವುದು ಮುಂತಾದ ತುರ್ತು ಚಿಕಿತ್ಸಾ ಸೇವೆಗಳ ಅಡಿಯಲ್ಲಿ ಬರುತ್ತದೆಇಂತಹ ಚಿಕಿತ್ಸೆಗಳನ್ನು ಮುಂದೂಡಲು ಸಾಧ್ಯವಿಲ್ಲಮುಂದೂಡಿದಲ್ಲಿ ಜೀವಕ್ಕೆ ಕುತ್ತು ಎಂಬ ಸಾಧ್ಯತೆಯೂ ಇರುತ್ತದೆಸೌಂಧರ್ಯವರ್ಧಕ ಇತರ ಚಿಕಿತ್ಸೆಗಳನ್ನು ಖಂಡಿತವಾಗಿಯೂ ಮುಂದೂಡಬಹುದಾಗಿದೆ ನಿಟ್ಟಿನಲ್ಲಿ ರೋಗಿಗಳ ಆರೋಗ್ಯ ಮತ್ತು ಸಮಾಜದ ಸ್ವಾಸ್ಥ ಇವೆರಡನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ತಕ್ಷಣವೇ ಸ್ಪಂದಿಸಬೇಕಾದ ಅನಿವಾರ್ಯ ಕಾಲ ಘಟ್ಟದಲ್ಲಿ ನಾವಿಂದು ನಿಂತಿದ್ದೇವೆಖಾಸಗಿ ದಂತ ಚಿಕಿತ್ಸಾಲಯಗಳನ್ನು ಮುಚ್ಚಿ ಎಂದು ಆದೇಶ ನೀಡಿದರೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ೨೪ ಗಂಟೆಗಳ ಕಾಲ ತುರ್ತು ದಂತ ಚಿಕಿತ್ಸೆಗಳನ್ನು ನೀಡಲು ಬೇಕಾದ ದಂತ ವೈಧ್ಯರು ಮತ್ತು ಸುರಕ್ಷಿತ ಸಲಕರಣೆಗಳನ್ನು ಒದಗಿಸಲು ದೊಡ್ಡ ಹೊಣೆಗಾರಿಕೆ ಸರ್ಕಾರ ಮತ್ತು ಆರೊಗ್ಯ ಇಲಾಖೆಯ ಮೇಲಿದೆಒಟ್ಟಿನಲ್ಲಿ ದುಬಾರಿ ಡೊನೇಶನ್ ನೀಡಿ ಬಿಡಿಎಸ್ ಪದವಿ ಪಡೆದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದಂತ ಚಿಕಿತ್ಸಾಲಯ ತೆರೆದ ದಂತ ವೈದ್ಯರು ಕೊರೋನಾ ವೈರಾಣುವಿನ ಕಾಟದಿಂದಾಗಿ ಕವಲು ದಾರಿಯಲ್ಲಿ ನಿಂತಿರುವುದಂತೂ ಸತ್ಯವಾದ ಮಾತು ಆದಷ್ಟು ಬೇಗ ಕೊರೋನಾ ಮಾರಿ ತೊಲಗಿ ಎಲ್ಲರೂ ಆರೋಗ್ಯವಂತರಾಗಲೀ ಮತ್ತು ಎಲ್ಲರ ಮುಖದಲ್ಲಿ ಮಂದಹಾಸ ಮಗದೊಮ್ಮೆ ಮೂಡಿಬರಲಿ ಎನ್ನುವುದೇ ಎಲ್ಲಾ ದಂತ ವೈದ್ಯರ ಒಕ್ಕೊರಲಿನ ಆಶಯವಾಗಿದೆಅದರಲ್ಲಿಯೇ ಸಮಾಜದ ಮತ್ತು ದಂತ ವೈದ್ಯರ ಹಿತವೂ ಅಡಗಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕೋವಿಡ್ 19: ಕವಲು ದಾರಿಯಲ್ಲಿ ದಂತ ವೈದ್ಯರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*