- ಏಳು ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ಲ್ಯಾಬ್ ಗೆ
ದ.ಕ.ಜಿಲ್ಲೆಯಲ್ಲಿ ಯಾವುದೇ ಕೋವಿಡ್ 19 ಹೊಸ ಪ್ರಕರಣಗಳು ಮಂಗಳವಾರವೂ ವರದಿಯಾಗಿಲ್ಲ ಹಾಗೂ ಕೇವಲ 7 ಮಂದಿಯದ್ದಷ್ಟೇ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ನಿಗಾದಲ್ಲಿ ಮೂವರು ಇದ್ದಾರೆ. ಈಗಾಗಲೇ 341 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ ಸಂದರ್ಭ 329 ಮಂದಿಯದ್ದು ನೆಗೆಟಿವ್ ಬಂದಿತ್ತು. 12 ಪಾಸಿಟಿವ್ ಕೇಸುಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅವರಲ್ಲಿ ನಾಲ್ವರು ಗುಣಮುಖರಾಗಿ ತೆರಳಿದ್ದಾರೆ. ಈಗ 8 ಮಂದಿಯಷ್ಟೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನೊಂದು ಸಂಗತಿಯೆಂದರೆ 1989 ಮಂದಿ ಹೋಂ ಕ್ವಾರಂಟೈನ್ ಮುಗಿಸಿದ್ದು, ಅವರಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ. ಇದೀಗ 3930 ಮಂದಿ ಹೋಂ ಕ್ವಾರಂಟೈನ್ ನಲ್ಲಿ ಇದ್ದು, 10 ಮಂದಿ ಇಎಸ್ ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ.
ವೆನ್ ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನೂತನ ಕೋವಿಡ್ ಪ್ರಯೋಗಾಲಯ ಇಂದಿನಿಂದ ಅಧಿಕೃತ ವಾಗಿ ಕಾರ್ಯಾಚರಣೆ ಆರಂಭಗೊಂಡಿದೆ. ಮೊದಲ ದಿನ 10 ಗಂಟಲ ದ್ರವ ಮಾದರಿಗಳ ಪರೀಕ್ಷೆ ನಡೆದಿದೆ. ಡಾ. ಶರತ್, ರೋಗಶಾಸ್ತ್ತಜ್ಞರು, (pathologist) ಈ ಪ್ರಯೋಗಲಯದ ಮೇಲ್ವಿಚಾರಕರಾಗಿದ್ದಾರೆ. ಈ ಪ್ರಯೋಗಾಲಯದಿಂದಾಗಿ ಆಯಾ ದಿನವೇ ಪರೀಕ್ಷಾ ವರದಿ ಲಭಿಸಲಿದೆ.
Be the first to comment on "ಶುಭಸುದ್ದಿ: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ ಪ್ರಕರಣಗಳಿಲ್ಲ"