ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲದಿನಗಳ ಹಿಂದೆ ದ.ಕ. ಜಿಲ್ಲಾಡಳಿತ ಕೇರಳ ಕರ್ನಾಟಕ ಗಡಿಭಾಗವಾದ ಇರಾ ಹಾಗೂ ವರ್ಕಾಡಿ ಪಂಚಾಯತ್ ಗೊಳಪಟ್ಟ ಬಾಳೆಪುಣಿಯಲ್ಲಿ ರಸ್ತೆ ಮುಚ್ಚಿರುವುದನ್ನು ಕಿಡಿಗೇಡಿಗಳು ತೆರವುಗೊಳಿಸಿದ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಅವರ ನಿರ್ದೇಶನದಂತೆ ಬಂಟ್ವಾಳ ಗ್ರಾಮಾಂತರ ಪೋಲಿಸರು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಹಕಾರದಲ್ಲಿ ರಸ್ತೆಯನ್ನು ಮತ್ತೆ ಮುಚ್ಚಿಸಿದ್ದಾರೆ.
ಯಾರದಾರೂ ಕಾನೂನು ಕೈಗೆತ್ತಿಕೊಂಡು ರಸ್ತೆ ತೆರವುಗೊಳಿಸಿ , ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳನ್ನು ಹರಡಿದಲ್ಲಿ ಅಂತವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಅಧಿಕಾರಿಗಳು ಈ ಸಂದರ್ಭ ನೀಡಿದರು.
ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಪಂಚಾಯತ್ ಸದಸ್ಯರಾದ ಎಂ.ಬಿ.ಉಮ್ಮರ್, ಮೊಯಿದಿಕುಂಞಿ, ಗೋಪಾಲ ಅಶ್ವತ್ಥಡಿ, ಇರಾ ಬೀಟ್ ಪೋಲಿಸ್ ಶಿವಕುಮಾರ್, ಮಾಜಿ ಪಂಚಾಯತ್ ಸದಸ್ಯರಾದ ಸಿ.ಹೆಚ್.ಮೊಹಮ್ಮದ್, ಮಸೀದಿಯ ಅಧ್ಯಕ್ಷರಾದ ಎಂ.ಬಿ.ಸಖಾಫಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲಾ, ಗ್ರಾಮಕರಣಿಕರಾದ ತನ್ವಿ ಪುತ್ರನ್, ಕಾರ್ಯದರ್ಶಿ ನಳಿನಿ ಎ.ಕೆ, ಪಂಚಾಯತ್ ಸಿಬ್ಬಂದಿಗಳಾದ ಗುಲಾಬಿ, ರಂಜನ್ ಶೆಟ್ಟಿ, ಗ್ರಾಮಸ್ಥರು ಸಹಕರಿಸಿದರು. ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯವಾಗಿ ಈ ಕಾರ್ಯಾಚರಣೆ ಮಾಡಲಾಗಿದ್ದು, ನಾಗರಿಕರ ಆರೋಗ್ಯದ ದೃಷ್ಟಿಯಿಂದ ಕೆಲದಿನಗಳ ಮಟ್ಟಿಗೆ ಸಾರ್ವಜನಿಕರು ಸಹಕರಿಸುವಂತೆ ಬಂಟ್ವಾಳ ತಾಲೂಕಿನ ತಹಶೀಲ್ದಾರ್ ಎಸ್.ಆರ್. ರಶ್ಮಿ, ಬಂಟ್ವಾಳ ಗ್ರಾಮಾಂತರ ಸಬ್ಇನ್ಸ್ ಪೆಕ್ಟರ್ ಎಮ್.ಎಸ್. ಪ್ರಸನ್ನ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರಾ, ದ. ಕ. ಜಿಲ್ಲಾಡಳಿತದ ಪರವಾಗಿ ವಿನಂತಿಸಿದ್ದಾರೆ.
Be the first to comment on "ತೆರವಾದ ಗಡಿ ರಸ್ತೆ, ಮತ್ತೆ ಮುಚ್ಚಿಸಿದ ಆಡಳಿತ"