- ಸಂಸದ ನಳಿನ್, ಸಚಿವ ಕೋಟ ಮನವಿ ಹಿನ್ನೆಲೆಯಲ್ಲಿ ಸರ್ಕಾರ ಆದೇಶ
ಎರಡು ತಿಂಗಳ ಪಡಿತರ ವಿತರಣೆಯನ್ನು ರಾಜ್ಯ ಸರಕಾರ ವಿತರಿಸುತ್ತಿದ್ದು, ಈಗಾಗಲೇ ಇದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಟಿಪಿಯ ಮೂಲಕ ಪಡಿತರ ವಿತರಣೆಯಾಗಲಿದ್ದು, ನ್ಯಾಯಬೆಲೆ ಅಂಗಡಿಯ ಆನ್‌ಲೈನ್ ವ್ಯವಸ್ಥೆಯಲ್ಲಿ ಕಾರ್ಡ್ ಸಂಖ್ಯೆ ನಮೂದಿಸಿದಾಗ ಅವರ ಆಧಾರ್ ಕಾರ್ಡ್‌ಗೆ ಮೊಬೈಲ್ ಲಿಂಕ್ ಆಗಿದ್ದರೆ, ಆ ಸಂಖ್ಯೆಗೆ ಒನ್ ಟೈಮ್ ಪಾಸ್‌ವರ್ಡ್(ಒಟಿಪಿ) ಬರಲಿದೆ. ಆದರೆ ವೈದ್ಯಕೀಯ ವಿಪತ್ತು ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ಪಡಿತರ ವಸ್ತುಗಳನ್ನು ಎಲ್ಲೆಲ್ಲಿ ಸ್ಥಳೀಯವಾಗಿ ವಿವಿಧ ಕಾರಣಗಳಿಂದ ಒ.ಟಿ.ಪಿ.ಯೊಂದಿಗೆ ಆಹಾರ ಧಾನ್ಯಗಳನ್ನು ಪಡೆಯಲು ತೊಂದರೆ ಇದೆಯೋ ಅಂಥ ಪ್ರದೇಶಗಳಲ್ಲಿ ಒ.ಟಿ.ಪಿ. ಇಲ್ಲದೆ ಆಹಾರ ಧಾನ್ಯ ಪೂರೈಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿ ಮೇರೆಗೆ ರಾಜ್ಯ ಸರಕಾರ ಈ ಆದೇಶ ಹೊರಡಿಸಿದೆ.
Be the first to comment on "ಪಡಿತರ ವಿತರಣೆ: ಒಟಿಪಿ ಸಮಸ್ಯೆಯಾದರೂ ವಿತರಣೆಗೆ ಕ್ರಮ"