www.bantwalnews.com Editor: Harish Mambady
ಕೊರೊನಾ ನಿಯಂತ್ರಣಕ್ಕೆ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಈಗಾಗಲೇ ತಾಲೂಕಾಡಳಿತ ಕ್ರಮ ಕೈಗೊಳ್ಳುತ್ತಿದ್ದು, ನಾವು ಲಕ್ಷ್ಮಣರೇಖೆ ಹಾಕಿಕೊಂಡರಷ್ಟೇ ಹಿಮ್ಮೆಟ್ಟಿಸಲು ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯ ಒಳಗೆ ಇರುವಂತಹ ಸಂದರ್ಭದಲ್ಲಿ ಮನಸ್ಸಿಗೆ ಕೆಲಸ ಕೊಡುವಂತಹ ವಿಚಾರಧಾರೆಗಳಲ್ಲಿ ತೊಡಗಿಸಿ, ಮನೆಮಂದಿಯೊಂದಿಗೆ ಸಂತಸದಿಂದ ಕಾಲಕಳೆಯುವಂತೆ ಸೂಚಿಸಿದರು. ಕೊರೊನಾ ನಿಯಂತ್ರಣಕ್ಕೆ ತಾಲೂಕಿನಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ , ಆರೋಗ್ಯ ಇಲಾಖೆಯ 345 ಕಾರ್ಯಕರ್ತೆಯರು ಸುಮಾರು 6000 ಮನೆ ಭೇಟಿಯ ಮೂಲಕ 65896 ಜನರನ್ನು ಭೇಟಿ ಮಾಡಿ ಜಾಗೃತಿ ಮೂಡಿಸಿದ್ದಾರೆ ಎಂದರು. ಮಾರ್ಚ್ 31ರಂದು ಬೆಳಗ್ಗೆ ಆರರಿಂದ 3 ಗಂಟೆಯ ವರೆಗೆ ಜಿಲ್ಲಾಡಳಿತ ದಿನಸಿ ಅಂಗಡಿಗಳ ತೆರೆಯುವಿಕೆಗೆ ಅವಕಾಶವನ್ನು ನೀಡಿದ್ದು ಈ ಸಂದರ್ಭದಲ್ಲಿ ಎಲ್ಲ ನಾಗರಿಕರು ಸಂಯಮದಿಂದ ವರ್ತಿಸಿ ಸಾಮಾಜಿಕ ಅಂತರವನ್ನು ಕೊಳ್ಳುವುದರ ಮೂಲಕ ಕೊರೋನ ವೈರಸ್ ಹರಡದಂತೆ ಜಿಲ್ಲಾಡಳಿತದ ಜೊತೆ ಸಹಕರಿಸುವಂತೆ ಅವರು ಮನವಿ ಮಾಡಿದರು.
Be the first to comment on "ನಾವು ಲಕ್ಷ್ಮಣರೇಖೆ ಹಾಕಿಕೊಂಡರೆ, ಕೊರೊನಾ ಹಿಮ್ಮೆಟ್ಟಿಸಲು ಸಾಧ್ಯ: ಶಾಸಕ ರಾಜೇಶ್ ನಾಯ್ಕ್"