- ಬಂಟ್ವಾಳ ಶಾಸಕರ ಸಹಾಯವಾಣಿಗೆ ನಿರಂತರ ಕರೆ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸಹಾಯವಾಣಿಗೆ ನಿರಂತರ ಕರೆಗಳು ಬರುತ್ತಿವೆ. ಇವುಗಳ ಪೈಕಿ ಕಲ್ಲಡ್ಕದಲ್ಲಿ ಕುಟುಂಬವೊಂದನ್ನು ರಕ್ಷಿಸಲಾಯಿತಲ್ಲದೆ, ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆ ಎಲ್ಲ ರೋಗಿಗಳ ಸಹಾಯಕರಿಗೆ ಊಟದ ವ್ಯವಸ್ಥೆಯನ್ನು ಕರೆಯ ಮೂಲಕ ಸ್ಪಂದಿಸಿ ನೀಡಲಾಯಿತು.
ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ರೋಗಿಯ ಸಹಾಯಕರೊಬ್ಬರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಚೇರಿಗೆ ಬಂದ ಮನವಿಗೆ ತಕ್ಷಣ ಸ್ಪಂದಿಸಿದ ಬಂಟ್ವಾಳ ಶಾಸಕರ ಸಹಾಯವಾಣಿ ತಂಡ ಸಂಸದರ ಆಪ್ತ ಸಹಾಯಕ ಸುಧಾಕರ್ ಮೂಲಕ ಲೇಡಿಗೋಶನ್ ಆಸ್ಪತ್ರೆಯ ಎಲ್ಲಾ ರೋಗಿಗಳ ಸಹಾಯಕರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಯಿತು.
ಕಲ್ಲಡ್ಕದ ಬೀದಿಬದಿಯ ಸಂತೆಕಟ್ಟೆಯೊಂದರಲ್ಲಿ ನಾಲ್ಕು ದಿನಗಳಿಂದ ದಿಕ್ಕುದೆಸೆ ಇಲ್ಲದ ಯಲ್ಲಾಪುರ ಮೂಲದ ಕುಟುಂಬವೊಂದಕ್ಕೆ ತಾತ್ಕಾಲಿಕ ವ್ಯವಸ್ಥೆಯೊಂದನ್ನು ಗುರುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸಹಾಯವಾಣಿ ತಂಡದ ಸದಸ್ಯ ವಜ್ರನಾಥ ಕಲ್ಲಡ್ಕ ಮೂಲಕ ತಿಳಿದ ತಹಸೀಲ್ದಾರ್ ರಶ್ಮಿ ಎಸ್.ಆರ್. ಕಲ್ಪಿಸಿಕೊಟ್ಟರು. ಸ್ಥಳೀಯ ಮುಖಂಡ ಮಹಮ್ಮದ್ ಮುಸ್ತಾಫಾ ಮನೆಯಲ್ಲಿ ತಾತ್ಕಾಲಿಕವಾಗಿರುವಂತೆ ಅವರು ವ್ಯವಸ್ಥೆ ಕಲ್ಪಿಸಿದ್ದಾರೆ.
Be the first to comment on "ಕಲ್ಲಡ್ಕದಲ್ಲಿ ಕುಟುಂಬ ರಕ್ಷಣೆ, ಆಸ್ಪತ್ರೆಯಲ್ಲಿ ರೋಗಿ ಸಹಾಯಕರಿಗೆ ಊಟದ ವ್ಯವಸ್ಥೆ"