- ಸಾರ್ವಜನಿಕರು ಮುಕ್ತವಾಗಿ ಬೆರೆಯುವುದಕ್ಕೆ ತಡೆ, ಏನೇನಿದೆ ಸೂಚನೆ ಇಲ್ಲಿದೆ ನೋಡಿ..
ದ.ಕ. ಜಿಲ್ಲೆಯ ನೆರೆಯ ರಾಜ್ಯ, ಜಿಲ್ಲೆಗಳಲ್ಲಿ ಕೋವಿಡ್ 19 (ಕೊರೊನಾ ವೈರಾಣು ಕಾಯಿಲೆ 2019)ಯ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನೆರೆ ರಾಜ್ಯ/ಜಿಲ್ಲೆಗಳಿಂದ ದ.ಕ.ಜಿಲ್ಲೆಗೆ ಪ್ರಯಾಣಿಕರ ಓಡಾಟದಿಂದ ವ್ಯಕ್ತಿಯಿಂದ ವ್ಯಕ್ತಿಗೆ ಈ ಸಾಂಕ್ರಾಮಿಕ ರೋಗವು ಹರಡುವ ಸಾಧ್ಯತೆ ಇದೆ. ದ.ಕ.ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್ ಸೋಮವಾರ ರಾತ್ರಿ ಹೊರಡಿಸಿದ ತುರ್ತು ಪ್ರಕಟಣೆಯಲ್ಲಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕರು ಮುಕ್ತವಾಗಿ ಬೆರೆಯುವುದನ್ನು ಅನಿವಾರ್ಯವಾಗಿ ತಡೆಯಬೇಕಾದ ಅವಶ್ಯಕತೆ ಇದೆ ಎಂದು ಹೇಳಿರುವ ಅವರು, 22ರ ರಾತ್ರಿ 9ರಿಂದ ಹೊರಡಿಸಿದ ನಿಷೇಧಾಜ್ಞೆಗೆ ಹೆಚ್ಚುವರಿ ನಿರ್ಬಂಧಗಳನ್ನು ಜಾರಿಗೊಳಿಸಿದ್ದಾರೆ.
ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಹೆಚ್ಚುವರಿ ನಿರ್ಬಂಧಗಳು ಹೀಗಿದೆ:
- ಅವಶ್ಯಕ ಸೇವೆಗಳಾದ ಆಹಾರ, ಪಡಿತರ ಅಂಗಡಿ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣಿನ ಮಾರುಕಟ್ಟೆ, ಸಗಟು ಮತ್ತು ಚಿಲ್ಲರೆ ವ್ಯಾಪಾರದ ಅಂಗಡಿಗಳನ್ನು ಮಾತ್ರ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ ತೆರೆಯಲು ಅವಕಾಶ ಇರುತ್ತದೆ.
- ಎಲ್ಲ ಕ್ಯಾಬ್ ಗಳು, ಆಟೊ ರಿಕ್ಷಾಗಳು, ಬಾಡಿಗೆ ವಾಹನ ಸೇವೆಗಳನ್ನು ಪ್ರಯಾಣಿಕರ ಸೇವೆಗೆ ಬಳಸತಕ್ಕದ್ದಲ್ಲ. ಕೇವಲ ತುರ್ತು ಪರಿಸ್ಥಿತಿ ಹಾಗೂ ಅವಶ್ಯಕ ವಸ್ತುಗಳ ಸಾಗಾಣಿಕೆಗೆ ಮಾತ್ರ ಬಳಸಲು ಅವಕಾಶ ನೀಡಲಾಗಿದೆ.
- ಅವಶ್ಯಕ ಸೇವೆಗಳು ಮತ್ತು ವಸ್ತುಗಳು, ಆಹಾರ, ವೈದ್ಯಕೀಯ ಉಪಕರಣಗಳು, ಔಷಧ, ಇಂಧನ, ಕೃಷಿಯುತ್ಪನ್ನಗಳ ಕಾರ್ಖಾನೆಗಳನ್ನು ಹೊರತುಪಡಿಸಿ, ಉಳಿದ ಕೈಗಾರಿಕೆ/ಕಾರ್ಖಾನೆಗಳ ಕಾರ್ಯಾಚರಣೆ ಸ್ಥಗಿತಗೊಳಿಸತಕ್ಕದ್ದು.
Be the first to comment on "ಕೋವಿಡ್ -19 ವಿರುದ್ಧ ಸಮರ: ದ.ಕ.ದಲ್ಲಿ ನಿಷೇಧಾಜ್ಞೆ ಕಟ್ಟುನಿಟ್ಟು, ಹೊಸ ನಿರ್ಬಂಧ ಜಾರಿ"