www.bantwalnews.com Editor: Harish Mambady
Photos and video: Sadashiva Kaikamba ಚಿತ್ರ, ವಿಡಿಯೊ ಕೃಪೆ: ಸದಾಶಿವ ಕೈಕಂಬ, ಬಿ.ಸಿ.ರೋಡ್
ಅಪಾಯಕಾರಿ ಕೋವಿಡ್-19 ಸೋಂಕು ಹರಡದಂತೆ ಮುಂಜಾಗರೂಕತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಜನತಾ ಕರ್ಫ್ಯೂ’ ಗೆ ಬಂಟ್ವಾಳ ತಾಲೂಕು ಸೇರಿದಂತೆ ರಾಜ್ಯಾದ್ಯಂತ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ..
ಎಲ್ಲಾ ರೀತಿಯ ಸಂಸ್ಥೆಗಳು ಹಾಗೂ ಸಂಘಟನೆಗಳು ಈ ಆಂದೋಲನಕ್ಕೆ ಸ್ವಯಂಪ್ರೇರಿತವಾಗಿ ಬೆಂಬಲ ವ್ಯಕ್ತಪಡಿಸಿದ್ದು, ಇಡೀ ರಾಜ್ಯವೇ ಸ್ತಬ್ಧಗೊಂಡಿದೆ. ಭಾನುವಾರ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಕಚೇರಿಗಳೂ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಬಹುತೇಕ ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲವೂ ಬಂದ್. ಖಾಸಗಿ ಆಸ್ಪತ್ರೆಗಳ ತುರ್ತು ಸೇವೆ ಲಭ್ಯ ಹಾಗೂ ಸರಕಾರಿ ಆಸ್ಪತ್ರೆಗಳೂ ಸೇವೆಗೆ ಲಭ್ಯವಿದೆ.
ಕೆಎಸ್ಆರ್’ಟಿಸಿ ಸಂಚಾರ ಸಂಪೂರ್ಣವಾಗಿ ಬಂದ್ ಆಗಿವೆ. ಖಾಸಗಿ ಬಸ್ಸು,ಆಟೋ, ಟ್ಯಾಕ್ಸಿಗಳೂ ರಸ್ತೆಗಿಳಿಯಲಿಲ್ಲ. ಅಗತ್ಯ ಸೇವೆಗಳನ್ನು ಹೊರತುಪಡಿಸಿದರೆ, ಬೇರೆಲ್ಲಾ ರೀತಿಯ ಸೇವೆಗಳೂ ಸಂಪೂರ್ಣ ಬಂದ್ ಆಗಿವೆ. ಬೀದಿ ಬದಿ ವ್ಯಾಪಾರಿಗಳು ಭಾನುವಾರ ವ್ಯಾಪಾರ, ವಹಿವಾಟು ನಡೆಸಲಿಲ್ಲ. ಬಿ.ಸಿ.ರೋಡಿನ ಬಸ್ ನಿಲ್ದಾಣ, ಕೈಕಂಬ, ಬಂಟ್ವಾಳ, ಕಲ್ಲಡ್ಕ, ಮಾಣಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸಂಪೂರ್ಣ ಬಂದ್ ಕಂಡುಬಂತು. ಬೆಳಗ್ಗೆಯೇ ಹಾಲು, ಪತ್ರಿಕಾ ವಿತರಕರು ಸುಮಾರು ಆರು ಗಂಟೆ ಒಳಗೇ ಕರ್ತವ್ಯ ಮುಗಿಸಿದ್ದು, ಬಂದ್ ಗೆ ಬೆಂಬಲ ಸೂಚಿಸಿದ್ದರು.
Be the first to comment on "ಕೋವಿಡ್ -19 ವಿರುದ್ಧ ಜಾಗೃತಿ, ಜನತಾ ಕರ್ಫ್ಯೂಗೆ ಬಂಟ್ವಾಳ ಸ್ತಬ್ದ"