ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿಗೆ ಆಗಮಿಸಿದ ಬಂಟ್ವಾಳ ಪುರಸಭೆಯ ಒಣಕಸ ವಿಲೇವಾರಿ ವಾಹನವನ್ನು ತಡೆದ ಹಿನ್ನೆಲೆಯಲ್ಲಿ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಸಹಾಯಕ ಕಮೀಷನರ್ ಸೂಚನೆಯಂತೆ ಸಜಿಪ ನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಡಂಪಿಂಗ್ ಯಾರ್ಡ್ ನಲ್ಲಿ ಬಂಟ್ವಾಳ ಪುರಸಭೆ ಸಿಬ್ಬಂದಿ, ಕಾರ್ಮಿಕರು ಬುಧವಾರ ಸಂಜೆ ತ್ಯಾಜ್ಯ ವಾಹನದೊಂದಿಗೆ ಆಗಮಿಸಿದ್ದು, ಈ ವೇಳೆ ವಿರೋಧ ವ್ಯಕ್ತಪಡಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ನಾಸೀರ್ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಇದಕ್ಕೂ ಮುನ್ನ ಕಂಚಿನಡ್ಕಪದವಿನಲ್ಲಿ ಬೆಳಗ್ಗಿನಿಂದಲೇ ತ್ಯಾಜ್ಯ ಸಾಗಾಟ ವಾಹನ ಆಗಮಿಸಿದರೆ, ತಡೆಯೊಡ್ಡಲು ಜನ ಜಮಾಯಿಸಿದ್ದರು. ಕಳೆದ ಶನಿವಾರ ಬಂಟ್ವಾಳ ಪುರಸಭೆಯಲ್ಲಿ ನಡೆದ ಮೀಟಿಂಗ್ ನಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ಕಂಚಿನಡ್ಕಪದವಿನ ಪುರಸಭೆಯ ಜಾಗದಲ್ಲೇ ನಡೆಸುವಂತೆ ಸಹಾಯಕ ಕಮೀಷನರ್ ಮದನ್ ಮೋಹನ್ ಸೂಚಿಸಿದ್ದು, ಈ ಸಂದರ್ಭ ಹಾಜರಿದ್ದ ಗ್ರಾಮಸ್ಥರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮಂಗಳವಾರ ಗ್ರಾಪಂ ಕಚೇರಿಯಲ್ಲಿ ಸರ್ವಪಕ್ಷ ಸಭೆ ನಡೆದು ವಿಲೇವಾರಿಗೆ ವಿರೋಧ ವ್ಯಕ್ತಪಡಿಸಿದ್ದರು.
Be the first to comment on "ತ್ಯಾಜ್ಯ ವ್ಯಾಜ್ಯ – ವಾಹನ ತಡೆದ ಪ್ರತಿಭಟನಾಕಾರರು, ಹಲವರು ವಶಕ್ಕೆ"