ಕೊರೊನೊ ವೈರಸ್ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದಲ್ಲಿ ತೀರ್ಥ, ಬ್ರಹ್ಮಾರ್ಪಣ, ತೀರ್ಥಸ್ನಾನ, ಕಲಶ ಸ್ನಾನಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಒಂದು ತಿಂಗಳು ಸುದೀರ್ಘ ಜಾತ್ರೆಗೆ ಭಕ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜನಜಾಗೃತಿ ಮೂಡಿಸುವ ಕಾರ್ಯವೂ ನಡೆಯುತ್ತಿದೆ.
www.bantwalnews.com Editor: Harish Mambady
ಈ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಭಾನುವಾರ ಸಭೆ ನಡೆಯಿತು. ಕೊರೊನಾ ಜಾಗೃತಿ ಕುರಿತು ಬ್ಯಾನರ್ ಅಳವಡಿಕೆ ಸಹಿತ ವಿವಿಧ ಕ್ರಮಗಳನ್ನು ಕೈಗೊಂಡು ಜನಜಾಗೃತಿ ಮೂಡಿಸಲು ಸೂಚಿಸಲಾಯಿತು. ತಾಲೂಕು ವೈಧ್ಯಾಧಿಕಾರಿ ಡಾ.ದೀಪಾ ಪ್ರಭು ಕೊರೋನಾ ಮುನ್ನೆಚರಿಕಾ ಕ್ರಮಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಪೊಳಲಿ ಆಡಳಿತ ಮೊಕ್ತೇಸರರಾದ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಕೃಷ್ಣಕುಮಾರ್ ಪೂಂಜಾ, ಚೇರಾ ಸೂರ್ಯನಾರಾಯಣ ರಾವ್,ಪ್ರಧಾನ ಅರ್ಚಕರಾದ ಮಾಧವ ಭಟ್,ಕೃಷ್ಣರಾಜ್ ಮಾರ್ಲ, ಬಂಟ್ವಾಳ ತಹಶೀಲ್ದಾರ್ ರಶ್ಮಿ.ಎಸ್.ಆರ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಪಂಚಾಯತ್ ಪಿಡಿಓ ಪದ್ಮನಾಯ್ಕ್, ತಾ.ಪಂ ಸದಸ್ಯ ಯಶವಂತ್ ಪೊಳಲಿ, ಜಿವರಾಜ್ ಶೆಟ್ಟಿ ಅಮ್ಮುಂಜೆ, ವೆಂಕಟೇಶ್ ನಾವಡ, ಸಂಪತ್ ಕುಮಾರ್ ಶೆಟ್ಟಿ, ಬಂಟ್ವಾಳ ಪೋಲೀಸ್ ಠಾಣಾಧಿಕಾರಿ ಪ್ರಸನ್ನ, ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ವಿಧ್ಯಾಚರಣ್ ಭಂಡಾರಿ ಇನ್ನಿತರು ಉಪಸ್ಥಿತರಿದ್ದರು.
ಒಟ್ಟು 29ದಿನಗಳ ಜಾತ್ರೆ, ಐದು ದಿನಗಳ ಚೆಂಡು
- ಮಾರ್ಚ್ 15 ರಿಂದ ಜಾತ್ರೆ ಆರಂಭ
- ಎಪ್ರಿಲ್ 6 ಮೊದಲ ಚೆಂಡು
- ಎಪ್ರಿಲ್ 7 ಎರಡನೇ ಚೆಂಡು
- ಎಪ್ರಿಲ್ 8 ಮೂರನೇ ಚೆಂಡು
- ಎಪ್ರಿಲ್ 9 ನಾಲ್ಕನೇ ಚೆಂಡು
- ಎಪ್ರಿಲ್ 10 ಕಡೇ ಚೆಂಡು
- ಎಪ್ರಿಲ್ 11 ಮಹಾ ರಥೋತ್ಸವ
- ಎಪ್ರಿಲ್ 12 ಆರಡ(ಅವಭೃತ ಸ್ನಾನ)
- ಇದಲ್ಲದೆ 5 ದಿನಕ್ಕೊಮ್ಮೆ ದಂಡಮಾಲೆ, ಕೋಳಿ ಗುಂಟ, ಜಾತ್ರೆ ಕೊನೆಗೊಂಡ ಬಳಿಕ ಕೊಡಮಣಿತ್ತಾಯಿ–ಉಳ್ಳಾಕುಲು–ಮಗೃಂತಾಯಿ–ಬಂಟ ಪರಿವಾರ ದೈವಗಳ ನೇಮೋತ್ಸವ ಜರಗಲಿದೆ.
Be the first to comment on "ಭಕ್ತರಿಗೆ ಕೊರೊನಾ ಜಾಗೃತಿ – ಪೊಳಲಿಯಲ್ಲಿ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಜಾತ್ರೋತ್ಸವ"