ಕೊರೊನಾ ಸೋಂಕು ಹಿನ್ನೆಲೆ: ರಾಜ್ಯ ಸರಕಾರ ಮಹತ್ವದ ಸೂಚನೆ
ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ಭೀತಿಯಿಂದ ರಾಜ್ಯ ಸರಕಾರ ಕಠಿಣ ಕ್ರಮವೊಂದನ್ನು ಶುಕ್ರವಾರ ಕೈಗೊಂಡಿದೆ.
ಒಂದು ವಾರ ಕ್ಲಬ್, ಥಿಯೇಟರ್, ಮಾಲ್, ಶಾಲೆ -ಕಾಲೇಜು ಬಂದ್, ಪ್ರವಾಸ ಹೋಗಬೇಡಿ, ದೊಡ್ಡ ಜನಸಂದಣಿ ಸೇರಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ನಾಳೆಯಿಂದ ಒಂದು ವಾರ ಕಾಲ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಸಭೆ, ಸಮಾರಂಭ, ಜಾತ್ರೆ, ಮದುವೆ, ಜನ್ಮ ದಿನಾಚರಣೆ, ಬೇಸಿಗೆ ಶಿಬಿರ, ಪ್ರದರ್ಶನ, ಕ್ರೀಡಾ ಕೂಟಗಳನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತುರ್ತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಾಳೆಯಿಂದ ಒಂದು ವಾರದವರೆಗೆ ಮಾಲ್, ಸಿನಿಮಾ ಥಿಯೇಟರ್, ಪಬ್, ನೈಟ್ ಕ್ಲಬ್, ವಸ್ತುಪ್ರದರ್ಶನ, ಕ್ರೀಡಾಕೂಟಗಳು, ದೊಡ್ಡ ಮದುವೆ, ಕಾನ್ಫರೆನ್ಸ್, ಹುಟ್ಟುಹಬ್ಬಗಳನ್ನು ಆಚರಿಸುವುದನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಸಾಧ್ಯವಾದಷ್ಟು ಮಟ್ಟಿಗೆ ಪ್ರವಾಸ ಮಾಡಬಾರದು, ಸರಕಾರಿ ವಸತಿ ಶಾಲೆ, ವಸತಿ ನಿಲಯಗಳಲ್ಲಿ ಹೆಚ್ಚಿನ ಕಾಳಜಿ ವಹಿಸಿ ಎಂದವರು ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆರೋಗ್ಯ ಸಚಿವ, ವೈದ್ಯರು ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆಗೆ ವಿಧಾನಸೌಧದಲ್ಲಿ ಸಭೆ ನಡೆಸಿದರು. ಈ ಸಭೆಯ ಬಳಿಕ ಮಾತನಾಡಿದ ಅವರು, ನಿಗಧಿಯಂತೆ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದೆ. ಕೊರೊನಾ ತಡೆಯಲು ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು.
Be the first to comment on "ರಾಜ್ಯದ ಚಟುವಟಿಕೆಯನ್ನೇ ಸ್ತಬ್ದಗೊಳಿಸಿದ ಕೊರೊನಾ – ವಾರದ ಮಟ್ಟಿಗೆ ಹಲವು ನಿರ್ಬಂಧ ವಿಧಿಸಿದ ರಾಜ್ಯ ಸರಕಾರ"