ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಂಟ್ವಾಳದಲ್ಲಿ ಪಂಜೆ ಮಂಗೇಶರಾಯ ಸ್ಮಾರಕ ಭವನ ನಿರ್ಮಾಣ ಸಾಗುತ್ತಿದ್ದು, ಇಲ್ಲಿಗೆ ಅವರ ಕುಟುಂಬದವರು ಆಗಮಿಸಿ ಭವನ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು. ಪಂಜೆ ಅವರ ಮನೆಯನ್ನು ಸರಕಾರಿ ಆಸ್ಪತ್ರೆ ವೈದ್ಯರ ವಸತಿಗೃಹವನ್ನಾಗಿಸಲಾಗಿದ್ದು, ಅಲ್ಲೇ ಪಕ್ಕದಲ್ಲಿ ಪಂಜೆ ಸ್ಮಾರಕ ಭವನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಶಾಸಕತ್ವದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸುಮಾರು 5 ಕೋಟಿ ರೂ ವೆಚ್ಚದ ಅನುದಾನದಲ್ಲಿ ಪಂಜೆ ಸ್ಮಾರಕ ಭವನ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 2017ರ ಅಕ್ಟೋಬರ್ 22ರಂದು ಚಾಲನೆ ನೀಡಿದ್ದರು. ಈ ಸಂದರ್ಭ ರೈ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಪಂಜೆ ಮಂಗೇಶರಾಯರ ಮೊಮ್ಮಗಳಾದ ಉಷಾ ಅರೋರಾ ಮತ್ತು ಅವರ ಪತಿ ಪ್ರಕಾಶ್ ಅರೋರಾ ವೀಕ್ಷಣೆ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಉಪಸ್ಥಿತರಿದ್ದು, ಭವನದ ಕುರಿತು ಮಾಹಿತಿ ನೀಡಿದರು.
. ಜಿ.ಪಂ.ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ ಅದ್ಯಕ್ಷ ಚಂದ್ರಹಾಸ ಕರ್ಕೆರಾ, ಉಪಾದ್ಯಕ್ಷರಾದ ಅಬ್ಬಾಸ್ ಆಲಿ, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪುರಸಭಾ ಸದ್ಯರಾದ ಜನಾರ್ದನ್ ಚಂಡ್ತಿಮಾರ್, ಮಾಜಿ ಸದಸ್ಯರಾದ ಜಗದೀಶ್ ಕುಂದರ್ ಭಂಡಾರಿಬೆಟ್ಟು, ಎ.ಪಿ.ಎಂ.ಸಿ ಉಪಾದ್ಯಕ್ಷರಾದ ಚಂದ್ರಶೇಖರ್ ಪೂಜಾರಿ, ಡಾ.ವಸಂತ ಬಾಳಿಗ, ಅಮರನಾಥ ಬಾಳಿಗ, ಪ್ರವೀಣ್ ಕಿಣಿ ಇತರರು ಉಪಸ್ಥಿತರಿದ್ದರು.
Be the first to comment on "ಪಂಜೆ ಭವನ ನಿರ್ಮಾಣ ವೀಕ್ಷಿಸಿದ ಕವಿಯ ಕುಟುಂಬಸ್ಥರು"