ಬಿ.ಸಿ.ರೋಡ್ ರೈಲ್ವೆ ಮಾರ್ಗದ ಬಳಿಯೇ ಇರುವ ಪೊಸಳ್ಳಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಬೃಹತ್ ಹೊಂಡವೊಂದು ಕಳೆದ ಕೆಲ ದಿನಗಳಿಂದ ಕಂಡುಬಂದಿದ್ದು, ಅಪಾಯಕಾರಿಯಾಗಿದೆ. ಬುಧವಾರ ಇಲ್ಲಿ ವ್ಯಕ್ತಿಯೊಬ್ಬ ಆಯತಪ್ಪಿ ಬಿದ್ದರೆ, ಗುರುವಾರ ಬೆಳಗ್ಗೆ ಹಸುವೊಂದು ಬಿದ್ದು ಪರದಾಡಬೇಕಾಯಿತು. ರೈಲ್ವೆ ಟ್ರ್ಯಾಕ್ ಗೆ ಸಮಾನಾಂತರವಾಗಿ ಇರುವ ಈ ರಸ್ತೆಯು ಬ್ರಹ್ಮಶ್ರೀ ನಾರಾಯಣಗುರು ವೃತ್ತಕ್ಕೆ ಸೇರುತ್ತದೆ. ಇಲ್ಲಿ ಸುತ್ತಮುತ್ತಲು ಕೆಲ ಮನೆಗಳಿದ್ದು, ಹತ್ತಿರದಲ್ಲಿ ಕುಲಾಲ ಸಮುದಾಯ ಭವನವೂ ಇದೆ. ಈ ಪರಿಸರದಲ್ಲಿ ಹಲವಾರು ಮಂದಿ ದಿನನಿತ್ಯ ನಡೆದುಕೊಂಡು ಹೋಗುತ್ತಿದ್ದು, ಜಾನುವಾರುಗಳೂ ಸಂಚರಿಸುತ್ತವೆ. ಆದರೆ ಘನ ವಾಹನವೊಂದರ ಆಘಾತದಿಂದ ರಸ್ತೆ ಕುಸಿದಿದೆ ಎನ್ನಲಾಗಿದ್ದು, ಇದಕ್ಕೆ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಪೊಸಳ್ಳಿ ಸಂಪರ್ಕ ರಸ್ತೆಯಲ್ಲಿ ಬೃಹತ್ ಹೊಂಡ"
Be the first to comment on "ಪೊಸಳ್ಳಿ ಸಂಪರ್ಕ ರಸ್ತೆಯಲ್ಲಿ ಬೃಹತ್ ಹೊಂಡ"