ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಒಡ್ಡೂರು ಫಾಮ್೯ ಹೌಸ್ ನಲ್ಲಿ ನಿರ್ಮಾಣಗೊಂಡ ಶ್ರೀ ಕೊಡಮಣಿತ್ತಾಯ ದೈವದ ಧರ್ಮಚಾವಡಿಗೆ ಬುಧವಾರ ಸಂಜೆ ರಾಜ್ಯದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಭೇಟಿ ನೀಡಿ ಶಾಸಕರ ಕೃಷಿಚಟುವಟಿಕೆಯನ್ನು ವೀಕ್ಷಿಸಿದರು.
ಈಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಬರಡು ಭೂಮಿಯನ್ನು ಸಾವಯವಕೃಷಿಭೂಮಿಯನ್ನಾಗಿಸಿರುವ ರಾಜೇಶ್ ನಾಯ್ಕ್ ಅವರ ಸಾಧನೆ ಅದ್ಬುತವಾಗಿದೆ.ರಾಜಕೀಯ ಕ್ಷೇತ್ರಕ್ಕೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ಸಾಕಷ್ಟು ಮಂದಿಯನ್ನು ಕಂಡಿದ್ದೆನೆ ಆದರೆ,ಇವರು ರಾಜಕೀಯ ಕ್ಷೇತ್ರಕ್ಕೆ ಬರುವ ಮುನ್ನವೇ ಮೂವತ್ತು ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡು ಮಾಡಿರುವ ಸಾಧನೆ ತನಗೆ ಸಂತಸ ತಂದಿದೆ ಎಂದರು. ಇಂತಹ ಪ್ರಶಾಂತ ವಾತಾವರಣದ ಕೃಷಿಭೂಮಿಯಲ್ಲಿ ನಡೆಯುವ ಶತಚಂಡಿಕಾಯಾಗದಿಂದ ರಾಜ್ಯದ,ಜಿಲ್ಲೆಯ ಜನತೆಗೆ ಸಮೃದ್ದಿ,ನೆಮ್ಮದಿಯನ್ನು ತರಲಿ ಎಂದು ಹಾರೈಸಿದರು.
ಸಚಿವರೊಂದಿಗೆ ಡಿಸಿಸಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವಾ,ಮಾಜಿ ಶಾಸಕ ಪದ್ಮನಾಭಕೊಟ್ಟಾರಿ,ಜಿಪಂಸದಸ್ಯ ರವೀಂದ್ರ ಕಂಬಳಿ,ತಾಪಂ ಸದಸ್ಯ ಪ್ರಭಾಕರ ಪ್ರಭು, ಬಿಜೆಪಿ ಮುಖಂಡರಾದ ದೇವದಾಸ ಶೆಟ್ಟಿ ಬಂಟ್ವಾಳ,ಸಂತೋಷ್ ಕುಮಾರ್ ರೈ ಬೋಳಿಯಾರ್,ಚಂದ್ರಹಾಸ್ ಪಂಡಿತ್ ಹೌಸ್,ದೇವಪ್ಪ ಪೂಜಾರಿ ಬಡಗಬೆಳ್ಳೂರು, ಸಂದೇಶ್ ಶೆಟ್ಟಿ, ಗಣೇಶ್ ರೈ ಮಾಣಿ,ರಮಾನಾಥ ರಾಯಿ,ಪುರುಷೊತ್ತಮ ಶೆಟ್ಟಿ,ರೋನಾಲ್ಡ್ ಡಿಸೋಜ ಅಮ್ಟಾಡಿ,ನಂದರಾಮ ರೈ, ಪವನ್ ಕುಮಾರ್,ರಂಜಿತ್ ಮೈರ,ಸೀತರಾಮ ಪೂಜಾರಿ ಮತ್ತಿತರರಿದ್ದರು. ಸಚಿವರನ್ನು ದ್ವಾರದ ಬಳಿ ಶಾಸ ರಾಜೇಶ್ ನಾಯ್ಕ್ ಮತ್ತು ಮುಖಂಡರು ಸ್ವಾಗತಿಸಿದರು,ಬಳಿಕ ಸಚಿವ ಸೋಮಶೇಖರ್ ಅವರು ಕೃಷಿ ಚಟುವಟಿಕೆ ,ಗೋಶಾಲೆಯಲ್ಲಿರುವ ಗೋವುಗಳನ್ನು ವೀಕ್ಷಿಸಿ ಸಂತಸಪಟ್ಟರು. ಶತಚಂಡಿಕಾಯಾಗ ಮತ್ತು ಕೊಡಮಣಿತ್ತಾಯ ದೈವದ ಧರ್ಮನೇಮೋತ್ಸವದ ಕುರಿತು ಶಾಸಕರಿಂದ ಮಾಹಿತಿ ಪಡೆದರು. ಮೂರನೇ ದಿನವಾದ ಬುಧವಾರವು ಶತಚಂಡಿಕಾಯಾಗದ ಪೂರ್ವಭಾವಿಯಾಗಿ ಮತ್ತು ಧರ್ಮಚಾವಡಿಯಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ನಡೆಯಿತು.
Be the first to comment on "ಒಡ್ಡೂರು ಫಾರ್ಮ್ಸ್ ಭೇಟಿ ನೀಡಿದ ಸಚಿವ ಸೋಮಶೇಖರ್"