ಬೆಂಗಳೂರಿನ ರೈಲ್ವೆ ಎಡಿಜಿಪಿ ಯಾಗಿ ಮುಂಬಡ್ತಿ ಹೊಂದಿ ವರ್ಗಾವಣೆಗೊಂಡಿರುವ ಮಂಗಳೂರು ಐ.ಜಿ.ಪಿ.ಅರುಣ್ ಚಕ್ರವರ್ತಿ ಇತಿಹಾಸ ಪ್ರಸಿದ್ಧ ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಭಾ ಕ್ಷೇತ್ರಕ್ಕೆ ಮಂಗಳವಾರ ಬೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಮೂರು ವರ್ಷಗಳ ಹಿಂದೆ ನೇತ್ರಾವತಿಯಲ್ಲಿ ಸ್ನಾನಕ್ಕಿಳಿದ ಸಂದರ್ಭ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ರಕ್ಷಿಸಿದ ಅರ್ಚಕ ಪ್ರಕಾಶ ಮರಾಠೆ ಅವರನ್ನು ಶ್ಲಾಘಿಸಿದ ಚಕ್ರವರ್ತಿ, ಅವರನ್ನು ಗೌರವಿಸಿದರು.
ದೇವಸ್ಥಾನದ ಪ್ರಧಾನ ಆರ್ಚಕ ವೇದಮೂರ್ತಿ ಮಹೇಶ್ ಭಟ್, ನಂದಾವರ ದೇವಾಲಯದ ಮ್ಯಾನೇಜರ್ ರಾಮಕೃಷ್ಣ ಭಂಡಾರಿ, ಸ್ಥಳೀಯರಾದ ಪ್ರವೀಣ್ ಗಟ್ಟಿ, ಸುರೇಶ್, ಲಕ್ಷಣ ನಂದಾವರ, ಯೋಗೀಶ್ ನಂದಾವರ, ಗಣೇಶ್ ದೇವಾಡಿಗ, ಕೇಶವ ಆಚಾರ್ಯ, ಡಿ.ವೈ.ಎಸ್.ಪಿ.ಗಳಾದ ನಟರಾಜ್, ವೆಲಂಟೈನ್ ಡಿ.ಸೋಜ, ನಗರ ಠಾಣಾ ಎಸ್. ಐ.ಅವಿನಾಶ್, ಸಿಬ್ಬಂದಿಗಳಾದ ಪ್ರಶಾಂತ್ ಶೆಟ್ಟಿ, ಸೀತಾರಾಮ, ವಿಜಯ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ನಂದಾವರಕ್ಕೆ ಅರುಣ್ ಚಕ್ರವರ್ತಿ ಭೇಟಿ"