Facebook Link Click: Maani Peraje sri Ramachandrapur mutt
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127

PHOTO COURTESY: GOUTHAM B.K.
ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಲೋಕಹಿತಕ್ಕಾಗಿ ಸ್ವಯಂ ನಡೆಸುವ ಮೂಲ ರಾಮಾಯಣದ ನಿತ್ಯ ಪಾರಾಯಣದ ಪರಿಸಮಾಪ್ತಿಯ ಕಾರ್ಯ ಸಾಮ್ರಾಜ್ಯ ಪಟ್ಟಾಭಿಷೇಕವಾಗಿದ್ದು, ಈ ಸಂದರ್ಭ ಶ್ರೀಗಳು ಶ್ರೀರಾಮದೇವರಿಗೆ ಕಿರೀಟ ಧಾರಣೆ ಸಹಿತ ಪಟ್ಟಾಭಿಷೇಕದ ಕಾರ್ಯಗಳನ್ನು ನೆರವೇರಿಸಿದರು.
ಈ ಸಂದರ್ಭ ಅಷ್ಟಾವಧಾನ, ಸಂಗೀತ, ನೃತ್ಯ ಸೇವೆಗಳನ್ನು ಭಕ್ತರು ನೆರವೇರಿಸಿದರು. ಶಾಸನ ತಂತ್ರದ ಪದಾಧಿಕಾರಿಗಳು, ಮಹಾಮಂಡಲ, ಮಂಡಲ, ವಲಯದ ಪದಾಧಿಕಾರಿಗಳು ಮತ್ತು ಭಕ್ತರು ಪಟ್ಟಾಭಿಷೇಕ ನಿಮಿತ್ತ ಕಪ್ಪಕಾಣಿಕೆ ಸಲ್ಲಿಸಿದರು
ಈ ಸಂದರ್ಭ ಆಶೀರ್ಚನ ನೀಡಿದ ರಾಘವೇಶ್ವರ ಸ್ವಾಮೀಜಿ, ಜಗತ್ತಿನ ಮೊದಲ ಶ್ರೇಷ್ಠ ಮಹಾಕಾವ್ಯ ರಾಮಾಯಣದ ಪಾರಾಯಣ ಅಗತ್ಯ. ಪ್ರತಿದಿನವೂ ಇದನ್ನು ನಿರ್ವಹಿಸಿದರೆ, ಕ್ಲೇಷಗಳು ಪರಿಹಾರವಾಗುತ್ತವೆ. ಬದುಕಿಗೆ ಶ್ರೇಯಸ್ಸಾಗುತ್ತದೆ. ರಾಮಾಯಣ ಓದುವುದರಿಂದ ಧರ್ಮ, ಅರ್ಥ, ಕಾಮ, ಮೋಕ್ಷ ಪಡೆಯಲು ಸಾಧ್ಯ. ರಾಮಾಯಣ, ಮಹಾಭಾರತ ಮತ್ತು ಭಾಗವತವನ್ನು ಎಲ್ಲರೂ ಓದುವುದು ಅಗತ್ಯ ಎಂದು ಹೇಳಿದರು. ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ, ಮಂಗಳೂರು ಹೋಬಳಿಯ ಮೂರು ಮಂಡಲಗಳ ಅಧ್ಯಕ್ಷರಾದ ಗಣೇಶ್ ಮೋಹನ ಕಾಶಿಮಠ, ಬಾಲಸುಬ್ರಹ್ಮಣ್ಯ ಭಟ್, ಹೇರಂಭ ಶಾಸ್ತ್ರಿ ಉಪಸ್ಥಿತರಿದ್ದರು, ಸೇವಾ ಸಮಿತಿ ಅಧ್ಯಕ್ಷ ಹಾರೆಕೆರೆ ನಾರಾಯಣ ಭಟ್ ಸ್ವಾಗತಿಸಿದರು. ಉದಯಶಂಕರ ನೀರ್ಪಾಜೆ ಮತ್ತು ಸತ್ಯ ಸಿಗಂದೂರು ಕಾರ್ಯಕ್ರಮ ನಿರೂಪಿಸಿದರು.
Be the first to comment on "ಮಾಣಿ ಮಠದಲ್ಲಿ ಶ್ರೀರಾಮದೇವರ ಸನ್ನಿಧಿಗೆ ಸಾಮ್ರಾಜ್ಯ ಪಟ್ಟಾಭಿಷೇಕ"