ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆ ಅಡಿಪಾಯ

  • ಕಲ್ಲಡ್ಕದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಚಿಂತನ ಮಂಥನ

ಬಂಟ್ವಾಳನ್ಯೂಸ್   ಸಂಪಾದಕ: ಹರೀಶ ಮಾಂಬಾಡಿ

ಸಶಕ್ತ ಭಾರತ ನಿರ್ಮಾಣಕ್ಕೆ ಸದೃಢ ಹೆಜ್ಜೆ ಎಂಬ ವಿಚಾರಕ್ಕೆ ಸಂಬಂಧಿಸಿ ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯ ಆಶ್ರಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಸೋಮವಾರ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸುತ್ತಿರುವುದು.

ಕಾರ್ಯಕ್ರಮವನ್ನು ಕಲಾವಿದೆ, ನ್ಯಾಯವಾದಿ ಮಾಳವಿಕಾ ಅವಿನಾಶ್ ಉದ್ಘಾಟಿಸಿ, ಇತಿಹಾಸ, ಸಂಶೋಧನೆಯತ್ತ ವಿದ್ಯಾರ್ಥಿಗಳು ಗಮನಹರಿಸಬೇಕಾಗಿದೆ ಎಂದರು.

ಬಿ.ಎಲ್.ಸಂತೋಷ್ ಮಾತನಾಡಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತನಾಡಿ, ಇಂದು ರಕ್ಷಣಾತ್ಮಕವಾಗಿಯಷ್ಟೇ ಅಲ್ಲ, ಆರ್ಥಿಕವಾಗಿ ಭಾರತ ಸಶಕ್ತವಾಗಿ ಮುನ್ನಡೆಯುತ್ತಿದ್ದು, ಸ್ವಾವಲಂಬಿಯಾಗುವತ್ತ ಸಾಗಿದೆ ಎಂದರು. ಜನರಿಗೆ ಅತಿಯಾದ ಉಚಿತ ಸ್ಕೀಮ್ ಗಳನ್ನು ಒದಗಿಸಿ, ಅವರನ್ನು ಮತ್ತಷ್ಟು ನಿಷ್ಕ್ರಿಯರನ್ನಾಗಿಸುವ ಬದಲು ಕ್ರಿಯಾಶೀಲರನ್ನಾಗಿಸುವ ನೆರವು ನೀಡುವುದರ ಮೂಲಕ ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಕನಸನ್ನು ಈಡೇರಿಸುವ ಕಾರ್ಯವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ನಡೆಸುತ್ತಿದೆ ಎಂದು ಬಿ.ಎಲ್. ಸಂತೋಷ್ ಹೇಳಿದರು.

ಮಾಳವಿಕಾ ಅವಿನಾಶ್ ಮಾತನಾಡಿದರು.

 ಪೌರತ್ವ ತಿದ್ದುಪಡಿ ಕಾಯ್ದೆ, ಘಟನೆಗಳ ಸುತ್ತಮುತ್ತಲಿನ ವಿಚಾರಗಳ ಬಗ್ಗೆ ಮಾತನಾಡಿದ ಮಾಳವಿಕಾ ಅವಿನಾಶ್, ಸಿಎಎ ಎಂಬುದು ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ ಎಂಬ ವಿಚಾರವನ್ನು ಮರೆಮಾಚಿ, ಪ್ರತಿಭಟನೆ ನೆಪದಲ್ಲಿ ಸಮಾಜವನ್ನು ಒಡೆಯುವ ಕಾರ್ಯವನ್ನು ಕಾಂಗ್ರೆಸ್ ಸಹಿತ ಕೆಲ ಶಕ್ತಿಗಳು ನಡೆಸುತ್ತಿವೆ ಎಂದು ಅಭಿಪ್ರಾಯಪಟ್ಟರು. ಮಹಮ್ಮದ್ ಆಲಿ ಜಿನ್ನಾ ಭಾರತ ಪ್ರತ್ಯೇಕತಾವಾದವನ್ನು ಮಂಡಿಸಿದರೆ, ಇಂದು ಅವರ ಹೆಸರನ್ನು ಪ್ರತಿಭಟನೆಗಳಲ್ಲಿ ಹೇಳಲಾಗುತ್ತಿರುವುದು ಗಂಭೀರ ವಿಚಾರ ಎಂದರು.

ಚಿಂತಕ, ವಿಮರ್ಶಕರೂ ಆಗಿರುವ ಬೆಂಗಳೂರಿನ ಆರೋಹಿ ರಿಸರ್ಚ್ ಫೌಂಡೇಶನ್ ನ ನಿರ್ದೇಶಕ ಎಂ.ಎಸ್.ಚೈತ್ರ ಮಾತನಾಡಿ, ಜನಸಂಖ್ಯೆಯಿಂದಾಗುವ ಲಾಭ, ನಷ್ಟ ಹಾಗೂ ಅಪಾಯಗಳ ಬಗ್ಗೆ ಬೆಳಕು ಚೆಲ್ಲಿದರು.

ದಿಕ್ಸೂಚಿ ಭಾಷಣ ಮಾಡಿದ ಡಾ. ಪ್ರಭಾಕರ ಭಟ್ ಕಲ್ಲಡ್ಕ, 300 ವರ್ಷಗಳ ಕಾಲ ಇಂಗ್ಲೀಷರು ಭಾರತೀಯರನ್ನು ಬೌದ್ಧಿಕವಾಗಿ ಕುಗ್ಗಿಸುವ ಕಾರ್ಯ ನಡೆಸಿದರು. ಶ್ರೀಮಂತ ದೇಶವಾಗಿದ್ದ ಭಾರತದ ಶಿಕ್ಷಣ ಪರಂಪರೆಯನ್ನು ರಾಘವೇಶ್ವರ ಸ್ವಾಮೀಜಿ ತಕ್ಷಶಿಲಾ ಮಾದರಿಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಹೊರಟಿದ್ದಾರೆ. ಇಂಥ ಬೆಳವಣಿಗೆ ನಡೆಯುತ್ತಿರುವ ಹೊತ್ತಿನಲ್ಲಿ ಭಾರತದ ಪ್ರಗತಿ, ಸಶಕ್ತ ಬೆಳವಣಿಗೆಗೆ ವಿಚಾರಸಂಕಿರಣಗಳು ಅಗತ್ಯವಿದೆ. ಉತ್ತಮ ಚರ್ಚೆಗಳು ಆಗಬೇಕಾಗಿದೆ ಎಂದರು. ಬೌದ್ಧಿಕ ದಾಸ್ಯದಿಂದ ಭಾರತ ನಲುಗಿದೆ ಎಂದು ಸಮಾರೋಪ ಭಾಷಣದಲ್ಲಿ ಹೇಳಿದ ಡಾ.ಬಿ.ವಿ.ವಸಂತಕುಮಾರ್, ಸರ್ವೇ ಜನಾಃ ಸುಖಿನೋ ಭವಂತು ಎಂಬ ಥಿಯರಿಯನ್ನು ಅನುಸರಿಸುತ್ತಿದ್ದ ನಾವು, ಮಹಾತ್ಮಾ ಗಾಂಧೀಜಿ ಮತ್ತು ಅಂಬೇಡ್ಕರ್ ಹೇಳಿದ್ದನ್ನು ಅಂದು ನಮ್ಮನ್ನಾಳಿದ ನಾಯಕರು ಅರ್ಥ ಮಾಡಿಕೊಂಡಿದ್ದರೆ, ಇಂದು ಈ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ ಎಂದರು.

ಈ ಸಂದರ್ಭ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಯತಿರಾಜ್ ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿದರು. ಸಂವಾದ ಕಾರ್ಯಕ್ರಮಗಳನ್ನು ಸುನೀಲ್ ಕುಲಕರ್ಣಿ, ಪ್ರೊ.ಪಿ.ಎಲ್. ಧರ್ಮ ನಡೆಸಿಕೊಟ್ಟರು. 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆ ಅಡಿಪಾಯ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*