ಸುಮಾರು 280 ವರ್ಷಗಳ ಹಿಂದೆಯೆ ದೂರದೃಷ್ಟಿ ಹೊಂದಿದ ಪವಾಡ ಪುರುಷ ಸಂತ ಸೇವಾಲಾಲರು ಪರಿಸರದಲ್ಲಾಗಬಹುದಾದ ಬದಲಾವಣೆಗಳನ್ನು ಅರಿತಿದ್ದರು ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್ ಹೇಳಿದರು.
ಬಿ.ಸಿ.ರೋಡಿನ ಮಿನಿವಿಧಾನಸೌಧ ಸಭಾಂಗಣದಲ್ಲಿ ಶನಿವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಿರ್ಯಾ ನಾಯ್ಕ್ ಪ್ರಾರ್ಥಿಸಿದರು. ನಿಕಟ ಪೂರ್ವ ಜಂಟಿ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ್ ದಿಕ್ಸೂಚಿ ಭಾಷಣ ಮಾಡಿದರು. ಶಿರಸ್ತೇದಾರ್ ಶ್ರೀಧರ್, ಆಹಾರ ಶಿರಸ್ತೇದಾರ್ ಶ್ರೀನಿವಾಸ್, ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಶುಕುಮಾರ್. ಸಮಾಜ ಬಾಂಧವರಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಕೆ.ಎಚ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕರಿಬಸಪ್ಪ ನಾಯ್ಕ್, ಸಲಹಾ ಸಮಿತಿ ಸದಸ್ಯರಾದ ಕಲ್ಲುದೇನು ಲಮಾಣಿ, ತೊಳಚ ನಾಯ್ಕ್, ಲೋಕ ನಾಯ್ಕ್, ಚಂದ್ರಶೇಖರ ನಾಯ್ಕ್, ದಿಲಿಪ್ ಕುಮಾರ್ ರಜಪೂತ್, ತಾರೇಶ್ ನಾಯ್ಕ್, ಕೃಷ್ಣ ನಾಯ್ಕ್, ಲಕ್ಷ್ಮಣ್ ಉಪಸ್ಥಿತರಿದ್ದರು. ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ ವಂದಿಸಿದರು.
Be the first to comment on "ಬಂಟ್ವಾಳದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆ"