ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಕಿಲ್ಪಾಡಿಯಲ್ಲಿರುವ ಪರಿಯಾಳ ಸಮಾಜ ಸಾಲಿಯಾನ್ ಕುಟುಂಬ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ನೂತನ ನಾಗಶಿಲೆ ಹಾಗೂ ಶ್ರೀನಾಗಬ್ರಹ್ಮಾದಿ ಪರಿವಾರ ದೇವರ ಪುನರ್ ಪ್ರತಿಷ್ಠಾ ಕಲಶಾಭಿಷೇಕ, ಶ್ರೀ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ಚತುಃ ಪವಿತ್ರ ಶ್ರೀ ನಾಗಬ್ರಹ್ಮ ಮಂಡಲೋತ್ಸವ ಮಾರ್ಚ್ 4ರಂದು ಬುಧವಾರ ನಡೆಯಲಿದೆ. ಶ್ರೀ ದೈವಗಳ ಸಿರಿಸಿಂಗಾರ ನೇಮೋತ್ಸವ ಮಾ.5 ಗುರುವಾರ ಮತ್ತು ಮಾ.6ನೇ ಶುಕ್ರವಾರ ನಡೆಯಲಿದೆ.
ಸಮಿತಿಯ ಗೌರವಾಧ್ಯಕ್ಷರಾಗಿ ವಿಶ್ವನಾಥ ಸಾಲಿಯಾನ್ ಅತ್ತಾವರ, ಗೋಪಾಲ ಸಾಲಿಯಾನ್ ಮಲ್ಪೆ, ವಸಂತ ಸಾಲಿಯಾನ್ ಬಲ್ಮಠ, ರಜನಿ ಸಾಲಿಯಾನ್ ಎರ್ಮಾಳ್, ವಾಮಯ್ಯ ಸಾಲಿಯಾನ್ ಪಡು, ಕೃಷ್ಣಪ್ಪ ಸಾಲಿಯಾನ್ ಕಲ್ಸಂಕ. ಅಧ್ಯಕ್ಷರಾಗಿ ವಿಶ್ವನಾಥ ಸಾಲಿಯಾನ್ ಬಂಟ್ವಾಳ, ಕೋಶಾಧಿಕಾರಿಯಾಗಿ ಭುಜಂಗ ಸಾಲಿಯಾನ್ ಬಿ.ಸಿ.ರೋಡ್, ಪ್ರಧಾನ ಕಾರ್ಯದರ್ಶಿ ಯಶೋಧರ ಸಾಲಿಯಾನ್ ಕಾಟಿಪಳ್ಳ, ಜತೆ ಕಾರ್ಯದರ್ಶಿಯಾಗಿ ನಾಗಪ್ಪ ಸಾಲಿಯಾನ್ ಬೆಳ್ಮಣ್, ಪ್ರಧಾನ ಅರ್ಚಕರಾಗಿ ಮಾನಂಪಾಡಿ ರಾಘವೇಂದ್ರ ಭಟ್ ಮತ್ತು ದೈವದ ಅರ್ಚಕರಾಗಿ ವಿಶ್ವನಾಥ ಅಮೀನ್ ಕಕ್ವ ಮತ್ತು ಸ್ವಾಗತ, ಸೇವಾ, ಊಟೋಪಚಾರ ಸಹಿತ ನಾನಾ ಸಮಿತಿಗಳು ಕಾರ್ಯಾಚರಿಸುತ್ತಿವೆ.
ಫೆ.7ರಂದು ಶುಕ್ರವಾರ ಶ್ರೀನಾಗದೇವರ ಸಂಕೋಚ, ಶ್ರೀನಾಗದೇವರ ಜಲಾಧಿವಾಸ ನಡೆದಿದ್ದು, ಮಾರ್ಚ್ 3ರಂದು ಮಂಗಳವಾರ ಸಾಮೂಹಿಕ ಪ್ರಾರ್ಥನೆ, ತೋರಣ, ಉಗ್ರಾಣ ಮುಹೂರ್ತ ಇತ್ಯಾದಿ ಧಾರ್ಮಿಕ ಕಾರ್ಯಹಕ್ರಮ, ಸಂಜೆ 4ರಿಂದ ವಾಸ್ತುಪೂಜೆ, ಇತ್ಯಾದಿ ಕಾರ್ಯಕ್ರಮಗಳು ನಡೆಯುವುದು.
ಮಾರ್ಚ್ 4ನೇ ಬುಧವಾರ ಬೆಳಗ್ಗೆ 6ರಿಂದ ಶ್ರೀನಾಗಬ್ರಹ್ಮಸ್ಥಾನದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಅನ್ನಸಂತರ್ಪಣೆ, ದೈವಸ್ಥಾನದಲ್ಲಿ ಮತ್ತು ದೈವದ ಮನೆಯಲ್ಲಿ ನಾನಾ ಪೂಜೆ, ಹೋಮಾದಿಗಳು ನಡೆಯುವುದು. ಮಂಡಲ ಚಪ್ಪರದಲ್ಲಿ ಗಣಯಾಗ, ಸಂಜೆ 6ಕ್ಕೆ ನಾಗಬ್ರಹ್ಮಸ್ಥಾನದಲ್ಲಿ ಹಾಲಿಟ್ಟು ಸೇವೆ ಸಂಜೆ 7ರಿಂದ ಅನ್ನಸಂತರ್ಪಣೆ, ರಾತ್ರಿ 9ರಿಂದ ಚತುಃಪವಿತ್ರ ಶ್ರೀ ನಾಗಬ್ರಹ್ಮಮಂಡಲೋತ್ಸವ, ಬಳಿಕ ಪ್ರಸಾದ ವಿತರಣೆ ನಡೆಯುವುದು.
ಮಾ.5ರ ಗುರುವಾರ ಬೆಳಗ್ಗೆ 9ಕ್ಕೆ ದೈವಸ್ಥಾನ, ದೈವದ ಮನೆಯಲ್ಲಿ ಪಂಚಕಜ್ಜಾಯ ಸೇವೆ, 9.30ಕ್ಕೆ ಚಪ್ಪರ ಮುಹೂರ್ತ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 5ಕ್ಕೆ ದೈವಗಳ ಭಂಡಾರ ಇಳಿಸುವುದು, 5.30ಕ್ಕೆ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ಶ್ರೀ ದುರ್ಗಾನಮಸ್ಕಾರ ಪೂಜೆ, 7.30ರಿಂದ ಮೈಸಂದಾಯ, ನಂದಿಗೋಣ, ಸಿರಿಸಿಂಗಾರ ನೇಮೋತ್ಸವ, ಅನ್ನಸಂತರ್ಪಣೆ, 8.30ರಿಂದ ಶ್ರೀ ಸತ್ಯದೇವತೆ ಸಿರಿಸಿಂಗಾರ ನೇಮೋತ್ಸವ, 10ರಿಂದ ಜುಮಾದಿ ಬಂಟ ಸಿರಿಸಿಂಗಾರ ನೇಮೋತ್ಸವ ಹಾಗೂ ಅಣ್ಣಪ್ಪ ಪಂಜುರ್ಲಿ ಸಿರಿಸಿಂಗಾರ ನೇಮೋತ್ಸವ ನಡೆಯಲಿದೆ.
6ರ ಶುಕ್ರವಾರ ಬೆಳಗ್ಗೆ ಶ್ರೀದೈವಗಳಿಗೆ ಶುದ್ಧಹೋಮ, ಪಂಚಕಜ್ಜಾಯ ಸೇವೆ, ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ, ಸಂಜೆ 5ರಿಂದ ಶ್ರೀ ದೈವಗಳ ಭಂಡಾರ ಇಳಿಸುವುದು, ಸಂಜೆ 7ರಿಂದ ಅನ್ನಸಂತರ್ಪಣೆ, ರಾತ್ರಿ 7.30ಕ್ಕೆ ಕಲ್ಲುರ್ಟಿ, ಪಂಜುರ್ಲಿ, ಸಿರಿಸಿಂಗಾರ ನೇಮೋತ್ಸವ, ತದನಂತರ ಗುಳಿಗ ದೈವದ ಸಿರಿಸಿಂಗಾರ ನೇಮೋತ್ಸವ.
ಮಾರ್ಚ್ 7ರ ಶನಿವಾರ ಬೆಳಗ್ಗೆ ಶ್ರೀದೈವಗಳಿಗೆ ಶುದ್ಧ ಹೋಮ, ಸಂಜೆ 5ಕ್ಕೆ ಶ್ರೀದೈವಗಳಿಗೆ ತಂಬಿಲ ಸೇವೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ 9845240931, 9945049790, 9980254010 ಸಂಪರ್ಕಿಸಿ.
Be the first to comment on "ಪರಿಯಾಳ ಸಮಾಜ ಸಾಲಿಯಾನ್ ಕುಟುಂಬ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ನೂತನ ನಾಗಶಿಲೆ ಹಾಗೂ ಶ್ರೀನಾಗಬ್ರಹ್ಮಾದಿ ಪರಿವಾರ ದೇವರ ಪುನರ್ ಪ್ರತಿಷ್ಠಾ ಕಲಶಾಭಿಷೇಕ"