ಇತಿಹಾಸ ಪ್ರಸಿದ್ಧ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸಾಲೆತ್ತೂರಿನಿಂದ ಆಗಮಿಸುವ ರಸ್ತೆಯ ಮಾರ್ನಬೈಲ್-ನಂದಾವರ ಭಾಗ ಅಭಿವೃದ್ಧಿಗೊಂಡಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶನಿವಾರ ಉದ್ಘಾಟಿಸಿದರು.
1 ಕೋಟಿ ರೂ ವೆಚ್ಚದ ಪಿಡಬ್ಲ್ಯುಡಿ ರಸ್ತೆ ಅಭಿವೃದ್ಧಿಯ ಕಾಮಗಾರಿಯ ಭಾಗವಾದ ಈ ರಸ್ತೆಯನ್ನು ಮಾರ್ನಬೈಲ್ ನಿಂದ ನಂದಾವರದವರೆಗೆ ಜಾತ್ರೆ ಹಿನ್ನೆಲೆಯಲ್ಲಿ ಪಿಡಬ್ಲ್ಯುಡಿ ವತಿಯಿಂದ ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. 3.5 ಮೀಟರ್ ಅಗಲವಿದ್ದ ಈ ರಸ್ತೆಯನ್ನು 7 ಮೀಟರ್ ಅಗಲಗೊಳಿಸಿ ಕಾಮಗಾರಿಯನ್ನು ಇಲಾಖೆ ನಡೆಸಿದೆ. ಜನವರಿ 22ರಂದು ಕಾಮಗಾರಿ ಶಂಕುಸ್ಥಾಪನೆ ನಡೆದಿತ್ತು. ಫೆ.8ಕ್ಕೆ ರಸ್ತೆ ಬಿಡುಗಡೆಗೊಂಡಂತಾಗಿದೆ.
ಈ ಸಂದರ್ಭ ಜಿ.ಪಂ ಸದಸ್ಯರಾದ ರವೀಂದ್ರ ಕಂಬಳಿ ನಂದಾವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ ಭಂಡಾರಿ, ಬಿಜೆಪಿ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ಪ್ರವೀಣ್ ಗಟ್ಟಿ, ತನಿಯಪ್ಪ ಮಡಿವಾಳ, ರೂಪೇಶ್ ಆಚಾರ್ಯ, ಪಂಚಾಯತ್ ಸದ್ಯಸರಾದ ನವೀನ್ ಅಂಚನ್, ಸುಮತಿ ಎಸ್.ವನಜಾ., ಗಿರಿಜಾ,ದಯಾನಂದ ಬಿಎಂ,ಅಶೋಕ್ ಗಟ್ಟಿ , ಸೂರಜ್ ಶೆಟ್ಟಿ ಸಜೀಪ, ಗುರುಕಿರಣ್ ಆಳ್ವ, ವಿಶ್ವನಾಥ್ ಕೊಟ್ಟಾರಿ, ಇದಿನಬ್ಬ,ಇಸ್ಮಾಯಿಲ್ ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಅರುಣ್‌ಪ್ರಕಾಶ್, ಗುತ್ತಿಗೆದಾರ ಹರೀಶ್ ಕುಮಾರ್ ಪುತ್ತೂರು ಉಪಸ್ಥಿತರಿದ್ದರು.
Be the first to comment on "ನಂದಾವರ ರಸ್ತೆ ಸಂಪರ್ಕ ಅಭಿವೃದ್ಧಿ ಉದ್ಘಾಟನೆ"