ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ಬಂಟ್ವಾಳ ಸರಕಾರಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಸ್ನಾತಕೋತ್ತರ ವಾಣಿಜ್ಯ ವಿಭಾಗ, ಪ್ಯಾರಾಲೀಗಲ್ ಸೆಲ್, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ರೋಟರಿ ಕ್ಲಬ್ ಬಂಟ್ವಾಳ ಸಹಯೋಗದಲ್ಲಿ ಬಂಟ್ವಾಳ ರೋಟರಿ ಸಭಾಂಗಣದಲ್ಲಿ ನಡೆಯಲಿದೆ.
ಸೀನಿಯರ್ ಸಿವಿಲ್ ನ್ಯಾಯಾಧೀಶ ಮಹಮ್ಮದ್ ಇಮ್ತಿಯಾಜ್ ಅಹಮದ್ ಉದ್ಘಾಟಿಸುವರು. ನಿಟ್ಟೆಯ ಪ್ರಾಧ್ಯಾಪಕ, ಕಾರ್ಪೊರೇಟ್ ತರಬೇತುದಾರ ಡಾ. ಸುಧೀರ್ ರಾಜ್ ದಿಕ್ಸೂಚಿ ಭಾಷಣ ಮಾಡುವರು.
ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ, ರೋಟರಿ ಕ್ಲಬ್ ಬಂಟ್ವಾಳ ಅದ್ಯಕ್ಷೆ ಶಿವಾನಿ ಬಾಳಿಗಾ, ಕಾಲೇಜು ಸಿಡಿಸಿ ಪ್ರಸಾದ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಷಯತಜ್ಞರಾದ ಡಾ. ಸಂದೇಶ್ ಕಾಮತ್ ಹಾಗೂ ಡಾ. ಸಚೇಂದ್ರ ಉಪನ್ಯಾಸ ನೀಡಲಿದ್ದಾರೆ. ವಿಚಾರಸಂಕಿರಣ ದಲ್ಲಿ ವಿವಿಧ ಕಾಲೇಜಿನ ಉಪನ್ಯಾಸಕರು ಸಂಶೋಧಕರು ಪ್ರಬಂಧ ಮಂಡಿಸಲಿದ್ದಾರೆ.
Be the first to comment on "ಫೆ.6ರಂದು ಬಂಟ್ವಾಳದಲ್ಲಿ ರಾಷ್ಟ್ರೀಯ ವಿಚಾರಸಂಕಿರಣ"