ಸರಕಾರಿ ಪದವಿ ಕಾಲೇಜು ಉದ್ಯೋಗ ಮಾರ್ಗದರ್ಶನ ಕೋಶದ ವತಿಯಿಂದ ರೋಟರಿ ಕ್ಲಬ್ ಬಂಟ್ವಾಳ ಸಹಯೋಗದಲ್ಲಿ ಬಂಟ್ವಾಳ ಸರಕಾರಿ ಪದವಿ ಕಾಲೇಜಿನಲ್ಲಿ ಸ್ಪೋಕನ್ ಇಂಗ್ಲೀಷ್ ಮತ್ತು ಬ್ಯುಟಿಶಿಯನ್ ತರಬೇತಿ ಶಿಬಿರಗಳು ಆರಂಭಗೊಂಡಿದೆ.
ಪ್ರಸ್ತುತ ಸನ್ನಿವೇದಲ್ಲಿ ಶೈಕ್ಷಣಿಕ, ಉದ್ಯೋಗ ಕ್ಷೇತ್ರದಲ್ಲಿಇಂಗ್ಲೀಷ್ ಸಂವಹನ ಕೌಶಲ್ಯ ಅನಿವಾರ್ಯ, ಬಹು ಭಾಷಾ ಸಾಮರ್ಥ್ಯ ಹೊಂದಿದವರಿಗೆ ಈ ದಿನಗಳಲ್ಲಿ ಅತೀ ಬೇಡಿಕೆ ಇದೆ ಎಂದು ಈ ಸಂದರ್ಭ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷೆ ಶಿವಾನಿ ಬಾಳಿಗ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು,
ಪ್ರಿನ್ಸಿಪಾಲ್ ಡಾ. ಅಜಕ್ಕಳ ಗಿರೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಭಾಷಾ ಕಲಿಕೆಯಲ್ಲಿ ಮೂಜುಗುರ ಅನಗತ್ಯ, ಪ್ರತೀ ಭಾಷೆಯನ್ನೂ ಆನಂದಿಸಿ ಕೊಂಡು ಕಲಿತಾಗ ಅದನ್ನು ಕರಗತ ಮಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಯಪಟ್ಟರು. ಬ್ಯುಟಿಶಿಯನ್ ನಂತಹ ಕೋರ್ಸುಗಳ ಕಲಿಕೆಯಿಂದ ವಿದ್ಯಾರ್ಥಿಗಳು ಸ್ವ ಉದ್ಯೋಗ ನಡೆಸಲು ಸಾಧ್ಯ ಎಂದು ಅವರು ಹೇಳಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಕೋಶದ ಸಂಚಾಲಕ ಡಾ. ಸತೀಶ್ ಗಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಹಾಗೂ ಉದ್ಯೋಗ ಮಾರ್ಗದರಶನ ಕೋಶದ ಸಂಚಾಲಕ ನಂದಕಿಶೋರ್ ಎಸ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
Be the first to comment on "ಬಂಟ್ವಾಳ ಸರ್ಕಾರಿ ಕಾಲೇಜಲ್ಲಿ ಸ್ಪೋಕನ್ ಇಂಗ್ಲೀಷ್, ಬ್ಯೂಟಿಶಿಯನ್ ತರಬೇತಿ"