ಸರಕಾರಿ ಜಮೀನಿನಲ್ಲಿ ಮನೆಕಟ್ಟಿ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದ ಗ್ರಾಮಾಂತರ ಪ್ರದೇಶದ ಬಡವರಿಗಾಗಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಂದ ಕ್ರಾಂತಿಕಾರಿ ಕಾನೂನಿನಿಂದಾಗಿ ಇಂದು ಬಡವರ ಬಾಳಿಗೆ ಹೊಸ ಬೆಳಕಾಗಿ ಸ್ವಾಭಿಮಾನದ ಸಂಕೇತವಾಗಿ ಮಾರ್ಪಟ್ಟಿದೆ ಎಂದು ಮಂಗಳೂರು ಶಾಸಕ ಯು.ಟಿ. ಖಾದರ್ ತಿಳಿಸಿದರು.
ಇರಾ ಮಲಯಾಳಿ ಬಿಲ್ಲವ ಸಭಾ ಭವನದಲ್ಲಿ ಇರಾ ಗ್ರಾಮದ 3ನೇ ಹಂತದ 94ಸಿ ಹಕ್ಕುಪತ್ರ ವಿತರಣೆ ನೆರವೇರಿಸಿದರು. ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಕುರ್ನಾಡು ಜಿ.ಪಂ. ಸದಸ್ಯರಾದ ಮಮತಾ ಗಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಬಿ. ಉಮ್ಮರ್, ಮೊಯಿದಿ ಕುಂಞಿ, ತುಳಸಿ ಪಿ.ಪೂಜಾರಿ, ಲೆನ್ನಿ ಡಿಸೋಜ, ಪಾರ್ವತಿ, ಸಿಸಿಲಿಯಾ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಎಸ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಗೆ, ಮಾದುಪಳ್ಳ, ಸಂಪಿಲ, ಮೊಂತಿಮಾರುಪಡ್ಪು, ಕುರಿಯಾಡಿ, ಪಂಜಾಜೆ, ರಸ್ತೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಾಸಕರು ಶಿಲಾನ್ಯಾಸ ನೆವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿ, ಗ್ರಾಮಕರಣಿಕ ತೌಫಿಕ್ ವಂದಿಸಿದರು.
Be the first to comment on "ಸಿದ್ಧರಾಮಯ್ಯ ಸರಕಾರದ ಕ್ರಾಂತಿಕಾರಕ ನಿರ್ಧಾರದಿಂದ 94ಸಿ ಹಕ್ಕುಪತ್ರ : ಯು.ಟಿ.ಖಾದರ್"