- ಚುನಾವಣೆ ನಡೆದ ಸ್ಥಾನಗಳು: 12 ಬಿಜೆಪಿ ಬೆಂಬಲಿತ – 7, ಕಾಂಗ್ರೆಸ್ ಬೆಂಬಲಿತ -5
www.bantwalnews.com Editor: Harish Mambady
ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು 7 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ನಡೆಸಲಿದ್ದಾರೆ. ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಶನಿವಾರ ದಿನವಿಡೀ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಾದ ಲಿಂಗಪ್ಪ ಪೂಜಾರಿ, ಲೋಲಾಕ್ಷಿ, ವಿಜಯಾನಂದ, ಅರುಣ್ ರೋಷನ್ ಡಿಸೋಜ, ಲತಾ, ಸುಂದರ ಪೂಜಾರಿ, ಚಂದ್ರಶೇಖರ ಬಂಗೇರ ಗೆಲುವು ಸಾಧಿಸಿದರು. ಕಾಂಗ್ರೆಸ್ ಬೆಂಬಲಿತ ಐವರು ಅಭ್ಯರ್ಥಿಗಳಾದ ಸುದರ್ಶನ ಜೈನ್, ಚಂದ್ರಹಾಸ ಕರ್ಕೇರ, ಹೊನ್ನಪ್ಪ ನಾಯ್ಕ, ರಾಜೇಶ್ ಕುಮಾರ್ ಮತ್ತು ಸಂಜೀವ ಪೂಜಾರಿ ವಿಜಯಿಯಾಗಿದ್ದಾರೆ. ಫಲಿತಾಂಶ ಘೋಷಣೆಯಾದ ಕೂಡಲೇ ಬಿಜೆಪಿ ಕಾರ್ಯಕರ್ತರು ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭ ಪಕ್ಷ ಪ್ರಮುಖರು ಉಪಸ್ಥಿತರಿದ್ದರು.
ಚುನಾವಣೆ ಸಂದರ್ಭ ಬೆಳಗ್ಗಿನ ಹೊತ್ತು ಗೊಂದಲದ ಪರಿಸ್ಥಿತಿ ತಲೆದೋರಿತು. ಮತದಾರರ ಪಟ್ಟಿಯ ಕುರಿತು ಆಕ್ಷೇಪಗಳಿಂದಾಗಿ ಕೆಲ ಹೊತ್ತು ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು. ಈ ಸಂದರ್ಭ ಸ್ಥಳದಲ್ಲಿ ಚುನಾವಣಾಧಿಕಾರಿಯೂ ಆಗಿರುವ ತಹಸೀಲ್ದಾರ್ ರಶ್ಮಿ ಎಸ್.ಆರ್. ನಿಷೇಧಾಜ್ಞೆ ವಿಧಿಸಿ ಬಿಗು ಬಂದೋಬಸ್ತ್ ಏರ್ಪಸಿದರು. ಬಳಿಕ ಚುನಾವಣಾ ಪ್ರಕ್ರಿಯೆ ಮುಂದುವರಿಯಿತು. ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಎಸ್ಸೈಗಳಾದ ಪ್ರಸನ್ನ,ಅವಿನಾಶ್ ನೇತೃತ್ವದಲ್ಲಿ ಪೊಲೀಸರು ಇಡೀ ಮಿನಿ ವಿಧಾನಸೌಧಕ್ಕೆ ಪೊಲೀಸ್ ಕಾವಲು ಹಾಕಿಸಿದರು.
ಗೆದ್ದವರು ಇವರು.
- ಲಿಂಗಪ್ಪ ಪೂಜಾರಿ, (ಸಹಕಾರ ಭಾರತಿ ಬಿಜೆಪಿ ಬೆಂಬಲಿತ)
- ಸುದರ್ಶನ ಜೈನ್, (ಕಾಂಗ್ರೆಸ್ ಬೆಂಬಲಿತ)
- ಲೋಲಾಕ್ಷಿ, (ಸಹಕಾರ ಭಾರತಿ ಬಿಜೆಪಿ ಬೆಂಬಲಿತ)
- ವಿಜಯಾನಂದ, (ಸಹಕಾರ ಭಾರತಿ ಬಿಜೆಪಿ ಬೆಂಬಲಿತ)
- ಅರುಣ್ ರೋಷನ್ ಡಿಸೋಜ, (ಸಹಕಾರ ಭಾರತಿ ಬಿಜೆಪಿ ಬೆಂಬಲಿತ)
- ಲತಾ, (ಸಹಕಾರ ಭಾರತಿ ಬಿಜೆಪಿ ಬೆಂಬಲಿತ)
- ಸುಂದರ ಪೂಜಾರಿ, (ಸಹಕಾರ ಭಾರತಿ ಬಿಜೆಪಿ ಬೆಂಬಲಿತ)
- ಚಂದ್ರಹಾಸ ಕರ್ಕೇರ, (ಕಾಂಗ್ರೆಸ್ ಬೆಂಬಲಿತ)
- ಚಂದ್ರಶೇಖರ ಬಂಗೇರ (ಸಹಕಾರ ಭಾರತಿ ಬಿಜೆಪಿ ಬೆಂಬಲಿತ)
- ಹೊನ್ನಪ್ಪ ನಾಯ್ಕ, (ಕಾಂಗ್ರೆಸ್ ಬೆಂಬಲಿತ)
- ರಾಜೇಶ್ ಕುಮಾರ್ (ಕಾಂಗ್ರೆಸ್ ಬೆಂಬಲಿತ)
- ಸಂಜೀವ ಪೂಜಾರಿ (ಕಾಂಗ್ರೆಸ್ ಬೆಂಬಲಿತ)
Be the first to comment on "ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್: ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ ವಿಜಯ"