ಪ್ಲಾಸ್ಟಿಕ್ ಸುಡುವುದನ್ನು ತಪ್ಪಿಸಲು ಮತ್ತು ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು ಅವರಿಗೆ ಸ್ಥಳೀಯ ನಾಗರಿಕರನ್ನೊಳಗೊಂಡ ತಂಡ ಮನವಿ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ಅಧ್ಯಕ್ಷರು, ಮುಂದಿನ ಎರಡು ತಿಂಗಳೊಳಗೆ ಗ್ರಾಪಂ ತ್ಯಾಜ್ಯ ಸಮಸ್ಯೆ ವಿಲೇವಾರಿಗೆ ಘಟಕವೊಂದನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು. ತಾತ್ಕಾಲಿಕ ನೆಲೆಯಲ್ಲಿ ಅಂಗನವಾಡಿ ಕೇಂದ್ರದ ಬಳಿ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಎರಡು ವಾರಕ್ಕೊಮ್ಮೆ ವಿಲೇವಾರಿ ಮಾಡುವುದಾಗಿ ಭರವಸೆ ನೀಡಿದರು. ಪ್ರತೀ ಮನೆಗೆ ಪೈಪ್ ಕಂಪೋಸ್ಟು ನೀಡಿ ಆ ಮುಖೇನ ಹಸಿ ಕಸ ವಿಲೇವಾರಿ ಮಾಡಲು ಸೂಚಿಸಿದರು.
ನಿಯೋಗದಲ್ಲಿ ಸ್ಥಳೀಯ ನಿವಾಸಿಗಳಾದ ಸುರೇಶ್ ಕುಮಾರ್, ಮೋಹನಾಚಾರ್ಯ, ರವಿಚಂದ್ರ, ಪ್ರಸಾದ್ ಪೂಜಾರಿ, ನಳಿನಿ ದಯಾನಂದ, ಕವಿತಾ ಹರೀಶ್, ಜಯಂತಿ ಯಾದವ, ಶುಭ ಶಶಿಧರ, ಹೇಮಾ ವಿಶ್ವನಾಥ ಉಪಸ್ಥಿತರಿದ್ದರು.
Be the first to comment on "ನರಿಕೊಂಬು ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ಶೀಘ್ರ ವಿಲೇವಾರಿಗೆ ಮನವಿ"