ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆ ಜ.14ರಿಂದ 22ರ ವರೆಗೆ ನಡೆಯಲಿದೆ
www.bantwalnews.com Editor: Harish Mambady
ಜ.14ರಂದು ಧ್ವಜಾರೋಹಣ, ಲಕ್ಷದೀಪೋತ್ಸವ ನಡೆಯಲಿದೆ. ಜ.15, 16 ಮತ್ತು 17ರಂದು ನಿತ್ಯೋತ್ಸವ ನಡೆಯಲಿದೆ. ಜ.18ರಂದು ಕೇಪುನಿಂದ ಶ್ರೀ ಮಲರಾಯ ದೈವದ ಭಂಡಾರ ಆಗಮಿಸಲಿದೆ. ರಾತ್ರಿ ಬಯ್ಯದ ಬಲಿ ಉತ್ಸವ ನಡೆಯಲಿದೆ. 19ರಂದು ಕೆರೆ ಆಯನ, 20ರಂದು ದರ್ಶನ ಬಲಿ, ಹೂತೇರು ನಡೆಯಲಿದೆ. 21ರಂದು ಮಹಾರಥೋತ್ಸವ ನಡೆಯಲಿದೆ. 22ರಂದು ಕವಟೋದ್ಘಾಟನೆ ನಡೆಯಲಿದೆ 14ರಿಂದ 22ರ ವರೆಗೆ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಗಳು ನಡೆಯಲಿವೆ.
ಶ್ರೀ ಕ್ಷೇತ್ರ ಮಂಜುನಾಥೇಶ್ವರ ಭಜನಾ ಪರಿಷತ್ ವಿಟ್ಲ, ಹಾಗೂ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ವಿಟ್ಲ ಸೀಮೆ ಇದರ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಒಡಿಯೂರು ಶ್ರೀಗಳು, ಮಾಣಿಲ ಶ್ರೀಗಳು, ಕಣಿಯೂರು ಶ್ರೀಗಳು, ಬಾಳೆಕೋಡಿ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಜ.14ರಂದು ಅರ್ಧ ಏಕಾಹ ಭಜನೆ ನಡೆಯಲಿದೆ. ಸಂಜೆ ಭಜನಾ ಉಲ್ಪೆ, ಹಸಿರುವಾಣಿ ಹೊರೆಕಾಣಿಕೆ ಮತ್ತು ಶ್ರೀ ದೇವರಿಗೆ ನೂತನ ರಜತ ಕವಚದ ಮೆರವಣಿಗೆ ನಡೆಯಲಿದೆ
Be the first to comment on "ಜನವರಿ 14ರಿಂದ 22ರವರೆಗೆ ವಿಟ್ಲದಲ್ಲಿ ಸಂಭ್ರಮದ ಜಾತ್ರೋತ್ಸವ"