ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಬಂಟ್ವಾಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಬಂಟ್ವಾಳ ಮಯ್ಯರಬೈಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಸಾನ್ ಗೋಷ್ಠಿ ಮತ್ತು ಹಡೀಲು ಬಿದ್ದ ಗದ್ದೆ ನಾಟಿ ಮಾಡುವ ಕಾರ್ಯ ನಡೆಯಿತು.
ಆಚಾರಿಪಲ್ಕೆ ಒಕ್ಕೂಟದ ಕೇಳ್ದೋಡಿ ಪ್ರಗತಿಬಂಧು ಸಂಘದ ಸದಸ್ಯರು ಕಳೆದ ವರ್ಷವೂ ಇದೇ ಹಡೀಲು ಬಿದ್ದ ಗದ್ದೆಯಲ್ಲಿ ನಾಟಿ ಕಾರ್ಯ ನಡೆಸಿದ್ದರು. ಈ ಬಾರಿಯೂ ರಾಜೇಶ್, ಪದ್ಮನಾಭ ನೇತೃತ್ವದಲ್ಲಿ ಸದಸ್ಯರು ಶುಕ್ರವಾರ ನಾಟಿ ಕಾರ್ಯ ನಡೆಸಿದರು.
ಕಿಸಾನ್ ಗೋಷ್ಠಿ ಮತ್ತು ನಾಟಿ ಮಾಡುವ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಬಿಸಿರೋಡ್ ವಲಯ ಅಧ್ಯಕ್ಷ ಶೇಖರ ಸಾಮಾನಿ ವಹಿಸಿದ್ದರು. ಕೃಷಿ ಇಲಾಖೆ ಅಧಿಕಾರಿ ನಾರಾಯಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ, ಸಿಎಚ್.ಸಿ. ಕೇಂದ್ರ ಯೋಜನಾಧಿಕಾರಿ ಅಶೋಕ್, ಯೋಜನೆಯ ಕೃಷಿ ಅಧಿಕಾರಿ ಜನಾರ್ದನ, ಬಿ.ಸಿ.ರೋಡ್ ವಲಯ ಮೇಲ್ವಿಚಾರಕ ಕೇಶವ್ ಕೆ, ಸೇವಾಪ್ರತಿನಿಧಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಕೃಷಿ ಮೇಲ್ವಿಚಾರಕರಾದ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು ಸೇವಾ ಪ್ರತಿ ನಿಧಿ ವನಜಾಕ್ಷಿ ಪ್ರಾರ್ಥನೆ ಮಾಡಿ ಕೃಷಿ ಅಧಿಕಾರಿ ಸಂತೋಷ್ ಸ್ವಾಗತಿಸಿ ವಲಯದ ಮೇಲ್ವಿಚಾರಕರಾದ ಕೇಶವ ಕೆ. ವಂದಿಸಿದರು ಇದೇ ವೇಳೆ ಭತ್ತದ ಬೆಳೆ ಮತ್ತು ಇಲಾಖೆಯಿಂದ ದೊರಕುವ ಸವಲತ್ತುಗಳ ಕುರಿತು ಕೃಷಿ ಇಲಾಖೆ ಅಧಿಕಾರಿ ನಾರಾಯಣ್ ಮಾಹಿತಿ ನೀಡಿದರು. ಮೌನೇಶ ವಿಶ್ವಕರ್ಮ ನೇತೃತ್ವದಲ್ಲಿ ಕಿರುಪ್ರಹಸನ ಈ ಸಂದರ್ಭ ನಡೆಯಿತು.
Be the first to comment on "ಹಡೀಲು ಬಿದ್ದ ಗದ್ದೆ ನಾಟಿ ಮಾಡಿದ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು"