ಹಿಂದು ಜಾಗರಣಾ ವೇದಿಕೆ ವಿಟ್ಲ ತಾಲೂಕು ಘಟಕ ಆಶ್ರಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಭಾನುವಾರ ಸಂಜೆ ಕಲ್ಲಡ್ಕ ಪಂಚವಟಿ ಸಭಾಂಗಣದಲ್ಲಿ ಜನಜಾಗೃತಿ ಸಮಾವೇಶ ಭಾರತ್ ಬಚಾವೋ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಅಕ್ಷತಾ ಬಜ್ಪೆ ಮಾತನಾಡಿ, ಸಿಎಎ ವಿರೋಧ ಹೆಸರಲ್ಲಿ ಮನಸ್ಸು ಕೆಡಿಸುವ ಕಾರ್ಯ ನಡೆಯುತ್ತಿದೆ. ದೇಶದ ಹಿತಕ್ಕೋಸ್ಕರ ಇಂದು ಕಾಯ್ದೆ ಜಾರಿಯಾಗುತ್ತಿದ್ದು, ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದರು.
ವಿಶ್ವ ಹಿಂದು ಪರಿಷತ್ ಪುತ್ತೂರು ಜಿಲ್ಲಾ ಸಾಮರಸ್ಯ ಪ್ರಮುಖ್ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾತನಾಡಿ, ಕಾಯ್ದೆ ವಿರೋಧಿಸುವವರು ಯಾರದ್ದೋ ಪ್ರಚೋದನೆಗೊಳಗಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಾಸ್ತವಾಂಶಗಳನ್ನು ಅರಿತರೆ ಕಾಯ್ದೆಯಿಂದ ಪ್ರಯೋಜನವಿದೆ. ಇದು ಯಾವುದೇ ಸಮುದಾಯ, ಧರ್ಮಗಳ ವಿರೋಧಿಯೂ ಅಲ್ಲ ಎಂದರು. ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಇದೇ ವೇಳೆ ಹಿಂದು ಜಾಗರಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ನುಡಿನಮನ ಸಲ್ಲಿಸಿದರು. ವೇದಿಕೆಯಲ್ಲಿ ಹಿಂದು ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ ನೆತ್ತರಕೆರೆ ಉಪಸ್ಥಿತರಿದ್ದರು.
ಹಿಂಜಾವೇ ತಾಲೂಕು ಅಧ್ಯಕ್ಷ ನರಸಿಂಹ ಶೆಟ್ಟಿ ಮಾಣಿ ಸ್ವಾಗತಿಸಿದರು. ತಾಲೂಕು ಕಾರ್ಯದರ್ಶಿ ಮನೋಜ್ ಪೆರ್ನೆ ವಂದಿಸಿದರು. ವಿಭಾಗ ಕಾರ್ಯಕಾರಣಿ ಸದಸ್ಯ ಗಣರಾಜ ಭಟ್ ಕೆದಿಲ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಧಾರ್ಮಿಕ ಪರಿಷತ್ತಿನ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಆರೆಸ್ಸೆಸ್ ನ ಜಿಲ್ಲಾ ಸೇವಾ ಪ್ರಮುಖ್ ಜಿ.ಕೆ.ಭಟ್, ಹಿಂಜಾವೇ ವಿಭಾಗ ಸಂಪರ್ಕ ಪ್ರಮುಖ್ ರತ್ನಾಕರ ಶೆಟ್ಟಿ ಕಲ್ಲಡ್ಕ, ಪ್ರಾಂತ ಕಾನೂನು ಪ್ರಮುಖ್ ಅರುಣ ಗಣಪತಿ, ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ ಶೆಟ್ಟಿ ಕಡಬ, ರಾಷ್ಟ್ರಸೇವಿಕಾ ಪ್ರಾಂತ ಪ್ರಮುಖ್ ಕಮಲಾ ಪ್ರ. ಭಟ್, ವಿಶ್ವ ಹಿಂದು ಪರಿಷತ್ ವಿಟ್ಲ ಪ್ರಖಂಡ ಕಾರ್ಯಾಧ್ಯಕ್ಷ ಪದ್ಮನಾಭ ವಿಟ್ಲ, ವಿಹಿಂಪ ವಿಟ್ಲ ತಾಲೂಕು ಅಧ್ಯಕ್ಷ ಕ.ಕೃಷ್ಣಪ್ಪ, ಬಜರಂಗದಳ ವಿಟ್ಲ ತಾಲೂಕು ಸಂಚಾಲಕ ಅಕ್ಷಯ್ ರಜಪೂತ್, ಆರೆಸ್ಸೆಸ್ ವಿಭಾಗ ಕಾರ್ಯವಾಹ ಜಗದೀಶ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಕಲ್ಲಡ್ಕದಲ್ಲಿ ಹಿಂಜಾವೇ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾಹಿತಿ"