ಬಂಟ್ವಾಳ: ಜೇಸಿ ಜೋಡುಮಾರ್ಗ ನೇತ್ರಾವತಿ ಪದಗ್ರಹಣ ಕಾರ್ಯಕ್ರಮವನ್ನು ಸೆ.144ರನ್ವಯ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಜೇಸಿ ಅಧ್ಯಕ್ಷ ಹರ್ಷರಾಜ್ ಸಿ. ತಿಳಿಸಿದ್ದಾರೆ.
ಜಾಹೀರಾತು
2020ನೇ ಸಾಲಿಗೆ ಜೇಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶ್ರೀನಿಧಿ ಭಟ್ ಟಿ.ಎನ್. ಪದಗ್ರಹಣ ಡಿಸೆಂಬರ್ 22ರಂದು ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ಸಂಜೆ 7 ಗಂಟೆಗೆ ನಿಗದಿಯಾಗಿತ್ತು. ಪದಾಧಿಕಾರಿಗಳಾಗಿ ಶ್ರೀನಿಧಿ ಭಟ್ (ಅಧ್ಯಕ್ಷ), ಹರ್ಷರಾಜ್ ಸಿ (ಐಪಿಪಿ), ಸುಬ್ರಹ್ಮಣ್ಯ ರಾವ್ ಪಿ (ಕಾರ್ಯದರ್ಶಿ), ಲಕ್ಷ್ಮಣ್ (ಜತೆ ಕಾರ್ಯದರ್ಶಿ), ಖಜಾಂಚಿಯಾಗಿ ಕಿಶನ್ ಎನ್. ರಾವ್, ಉಪಾಧ್ಯಕ್ಷರುಗಳಾಗಿ ಆಶಿಕ್ ಕುಕ್ಕಾಜೆ, ಅಮಿತಾ ಹರ್ಷರಾಜ್, ಗಾಯತ್ರಿ ಲೋಕೇಶ್, ಕೃಷ್ಣರಾಜ್ ರಾವ್ ಮತ್ತು ನರಸಿಂಹ ಮಯ್ಯ, ಮಲ್ಲಿಕಾ ಆಳ್ವ (ಜೇಸಿರೆಟ್ ಅಧ್ಯಕ್ಷೆ), ಅಭಿಷೇಕ್ (ಜೇಜೇಸಿ ಅಧ್ಯಕ್ಷ), ಜಯರಾಜ್ ಎಸ್. ಬಂಗೇರ, ಧೀರಜ್ ಹೆಚ್., ಹರಿಶ್ವಂದ್ರ ಆಳ್ವ, ರವೀಂದ್ರ ಕುಕ್ಕಾಜೆ, ಶೈಲಜಾ ರಾಜೇಶ್ ಹಾಗೂ ಹರಿಪ್ರಸಾದ್ ಕುಲಾಲ್ (ನಿರ್ದೇಶಕರು) ಇವರು ಆಯ್ಕೆಗೊಂಡಿರುತ್ತಾರೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಜೇಸಿ ಜೋಡುಮಾರ್ಗ ಪದಗ್ರಹಣ ಕಾರ್ಯಕ್ರಮ ಮುಂದಕ್ಕೆ"
Be the first to comment on "ಜೇಸಿ ಜೋಡುಮಾರ್ಗ ಪದಗ್ರಹಣ ಕಾರ್ಯಕ್ರಮ ಮುಂದಕ್ಕೆ"