ಇಲ್ಲಿನ ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಅನ್ನು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಂಗಳವಾರ ಮಧ್ಯಾಹ್ನ ಉದ್ಘಾಟಿಸಲಿದ್ದಾರೆ. ಎಂ.ಆರ್.ಪಿ.ಎಲ್. ಕಂಪನಿ ಪ್ರಾಯೋಜಿಸಿದ ಕಂಪ್ಯೂಟರ್ ಲ್ಯಾಬ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು ಎಂದು ಶಾಲಾ ಕರೆಸ್ಪಾಂಡೆಂಟ್ ಭಾಮಿ ವಿಠಲದಾಸ ಶೆಣೈ ತಿಳಿಸಿದ್ದಾರೆ.

ATAL TINKARING LAB

COMPUTER LAB
ಮುಖ್ಯ ಅತಿಥಿಯಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಅತಿಥಿಗಳಾಗಿ ತಹಸೀಲ್ದಾರ್ ರಶ್ಮಿ ಎಸ್.ಆರ್, ಎಂ.ಆರ್.ಪಿ.ಎಲ್. ಸಿಜಿಎಂ ಸಂದೀಪ್ ನಾಯ್ಕ್, ಎಸ್.ವಿ.ಎಸ್.ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ, ಜಿಲ್ಲಾ ವಿದ್ಯಾಂಗ ಇಲಾಖೆ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ, ಬಿಇಒ ಜ್ಞಾನೇಶ್ ಭಾಗವಹಿಸುವರು ಎಂದು ಆಡಳಿತಾಧಿಕಾರಿ ಐತಪ್ಪ ಪೂಜಾರಿ, ಮುಖ್ಯೋಪಾಧ್ಯಾಯರಾದ ಸುಜಾತಾ ಬಿ, ಹರಿಪ್ರಸಾದ್, ಪಿಟಿಎ ಅಧ್ಯಕ್ಷ ಶ್ರೀಧರ್ ಬಿ. ಅವರು ಮಾಹಿತಿ ನೀಡಿದ್ದಾರೆ.
Be the first to comment on "ಅಟಲ್ ಟಿಂಕರಿಂಗ್, ಕಂಪ್ಯೂಟರ್ ಲ್ಯಾಬ್ ಇಂದು ಉದ್ಘಾಟನೆ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಂಟ್ವಾಳಕ್ಕೆ"