ಯಾವುದೇ ಹಿಂಜರಿಕೆ ಬಿಟ್ಟು ಪ್ರಶ್ನೆ ಕೇಳಲು ಧೈರ್ಯ ಮಾಡಿ. ನಿಮ್ಮ ಪ್ರಶ್ನೆಗಳು ಅಧಿಕಾರಿಗಳನ್ನು ಬೆರಗುಗೊಳಿಸುವಂತೆ ಮಾಡಲು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಹೇಳಿದರು.
ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪುರಸಭಾ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಸಂವಾದ ನಡೆಸಿದರು.
ಮಕ್ಕಳ ಹಕ್ಕುಗಳ ಸಂರಕ್ಷಣೆ ನಾಗರಿಕ ಸಮಾಜದ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಪೋಷಕ ವರ್ಗ ಸ್ಪಂದಿಸಬೇಕಾಗಿದೆ ಎಂದರು.
ನಗರ ಠಾಣಾಧಿಕಾರಿ ಕುಮಾರ್ ಸಿ.ಕೆ. ಅವರು ಮಾತನಾಡಿ, ಮಕ್ಕಳ ತಮ್ಮ ಹಕ್ಕುಗಳನ್ನು ಅರಿತುಕೊಂಡು ಜಾಗೃತರಾಗಬೇಕು ಎಂದರು. ಬಳಿಕ ಮಕ್ಕಳ ಜತೆ ಮಗು ಸ್ನೇಹಿ ಪೊಲೀಸ್ ಪರಿಕಲ್ಪನೆಯ ಬಗ್ಗೆ ವಿವರಿಸಿದರು.
ಪುರಸಭಾಧಿಕಾರಿ ಲೀಲಾವತಿ ಸಭಾಧ್ಯಕ್ಷತೆ ವಹಿಸಿದರು. ಆರೋಗ್ಯ ಇಲಾಖಾಧಿಕಾರಿ ಡಾ. ವಾಣಿಶ್ರೀ, ಸಾರಿಗೆ ಅಧಿಕಾರಿ ಗಣೇಶ್, ಮೆಸ್ಕಾಂ ಅಧಿಕಾರಿ ಸುಬ್ರಹ್ಮಣ್ಯ ಪ್ರಸಾದ್ ಬಿ.ಜೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.
ಪುರಸಭಾ ಸದಸ್ಯರಾದ ಹರಿಪ್ರಸಾದ್, ವಿದ್ಯಾವತಿ ಪ್ರಮೋದ್ ಕುಮಾರ್, ಶೋಭಾವತಿ ಭಾಗವಹಿಸಿದರು. ಶಿಕ್ಷಣ ಸಂಯೋಜಕಿ ಸುಶೀಲ
ಪಡಿ ಸಂಸ್ಥೆಯ ಸಂಯೋಜಕಿ ರಾಜೇಶ್ಚರಿ, ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯೆ ಶಾರದಾ ಕಾವಳಕಟ್ಟೆ ಸಂವಾದ ನಡೆಸಿಕೊಟ್ಟರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಫಾರೂಕ್ ಬಂಟ್ವಾಳ ಸ್ವಾಗತಿಸಿ, ಪ್ರಸ್ತಾವನೆ ಮಾತನಾಡಿದರು.
ಕೇಂದ್ರದ ಪ್ರಧಾನ ಕಾರ್ಯದರ್ಶಿ ಎ.ಕೆ.ಹ್ಯಾರೀಸ್ ವಂದಿಸಿದರು. ಬಂಟ್ವಾಳ ಪುರಸಭೆ, ಪಡಿ ಮಂಗಳೂರು ಹಾಗೂ ಶಿಕ್ಷಣ ಸಂಪನ್ಮೂಲ ವತಿಯಿಂದ ನಡೆದ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಹಯೋಗ ನೀಡಿದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
Be the first to comment on "ಪ್ರಶ್ನೆ ಕೇಳಲು ಹಿಂಜರಿಕೆ ಬೇಡ – ವಿದ್ಯಾರ್ಥಿಗಳಿಗೆ ಅಧಿಕಾರಿಗಳ ಕಿವಿಮಾತು"