ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರಿನ ೨೦೧೮ನೇ ಸಾಲಿನ ಪ್ರಶಸ್ತಿ ಪ್ರದಾನ ಚಿಕ್ಕಮಗಳೂರಿನಲ್ಲಿ ಸೋಮವಾರ ಸಂಜೆ ನಡೆಯಿತು. ಗೌರವ ಪ್ರಶಸ್ತಿ ಒಟ್ಟು ಐವರಿಗೆ ದೊರಕಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ಉಡುಪಿಯ ಗುಂಡ್ಮಿ ಸದಾನಂದ ಐತಾಳ್ ಪ್ರಶಸ್ತಿ ಪಡೆದುಕೊಂಡರು. ಕುಂಬಳೆ ಶ್ರೀಧರ ರಾವ್ ಸೇರಿದಂತೆ ಒಟ್ಟು 10 ಮಂದಿಗೆ ಯಕ್ಷಸಿರಿ ಪ್ರಶಸ್ತಿ ದೊರಕಿದ್ದು, ಸಚಿವ ಸಿ.ಟಿ. ರವಿ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ|ಎಂ.ಎ.ಹೆಗಡೆ, ಅಕಾಡೆಮಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಪಾರ್ತಿಸುಬ್ಬ ಪ್ರಶಸ್ತಿ‘ಗೆ ಗುಂಡ್ಲುಪೇಟೆ ತಾಲೂಕು, ಕಬ್ಬಳ್ಳಿಯ ಯಕ್ಷಗಾನ ಕಲಾವಿದ ಬಂಗಾರಾಚಾರಿ ಆಯ್ಕೆಯಾಗಿದ್ದರೆ, ಗೌರವ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಗುಂಡ್ಮಿ ಸದಾನಂದ ಐತಾಳ, ರಾಮರಾಜೇ ಅರಸ್, ಎಸ್.ಸಿ.ಜಗದೀಶ್ ಮತ್ತು ಕೆ.ಸಿ.ಮೋಹನ್ ಪಾತ್ರರಾಗಿದ್ದಾರೆ.
ಯಕ್ಷಸಿರಿ ಪ್ರಶಸ್ತಿ:
”ಕುಂಬ್ಳೆ ಶ್ರೀಧರರಾವ್, ಮೋಹನ್ ಬೈಪಡಿತ್ತಾಯ, ಮಣೂರು ನರಸಿಂಹ ಮಧ್ಯಸ್ಥ, ನಿತ್ಯಾನಂದ ಹೆಬ್ಬಾರ್, ಕೃಷ್ಣ ಮಾಣಿ ಅಗೇರ, ಭಾಸ್ಕರ ಜೋಶಿ ಶಿರಳಗಿ, ಎಸ್.ಪಿ. ಮುನಿಕೆಂಪಯ್ಯ, ನಾರಾಯಣಸ್ವಾಮಿ, ಡಾ. ಪಿ. ಶಾಂತಾರಾಮ ಪ್ರಭು ಮತ್ತು ಮದಂಗಲ್ಲು ಆನಂದ ಭಟ್ ಅವರಿಗೆ ಯಕ್ಷಸಿರಿ ಪ್ರಶಸ್ತಿ ಹಾಗೂ ‘ಡಾ. ಎನ್. ನಾರಾಯಣ ಶೆಟ್ಟಿ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಡಾ. ಕೆ.ಎಂ. ರಾಘವ ನಂಬಿಯಾರ್ ಪುಸ್ತಕ ಬಹುಮಾನಕ್ಕೆ ಭಾಜನರಾಗಿದ್ದಾರೆ.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
Be the first to comment on "ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ"