www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
ಬಿಲ್ಲವ ಶಕ್ತಿ ರಾಜ್ಯಕ್ಕೆ ಮಾದರಿಯಾಗಲು ಹಾಗೂ ಸಮಾಜಕ್ಕೆ ಆತಂಕ ಬಂದಾಗ ಮಾರ್ಗದರ್ಶನ ನೀಡಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಭಾನುವಾರ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಬಿಲ್ಲವ ಕಣ್ಮಣಿಗಳ ಅಭಿನಂದನಾ ಸಮಿತಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಂಘಗಳ ಹಾಗೂ ಯುವವಾಹಿನಿ ಬಂಟ್ವಾಳ ಮತ್ತು ಮಾಣಿ ಘಟಕಗಳ ಸಹಯೋಗದೊಂದಿಗೆ ನಮ ಬಿರುವೆರ್ ಐಕ್ಯತಾ ಸಮಾವೇಶದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇವಸ್ಥಾನಗಳ ಪಟ್ಟಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಂದಿರ: ತಾನು ಮಂತ್ರಿಯಾದ ಮೇಲೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ, ಕೋಟಿ ಚೆನ್ನಯ್ಯ ಗರೋಡಿಗಳು ದೇವಸ್ಥಾನಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ ಎಂದ ಕೋಟ ಶ್ರೀನಿವಾಸ ಪೂಜಾರಿ, ಇನ್ನು ಬಿಲ್ಲವ ಸಮಾಜ ಸಹಿತ ಅಸಹಾಯಕರ ಧ್ವನಿಯಾದ ನಾರಾಯಣಗುರು ಹಾಗೂ ಸ್ವಾಭಿಮಾನದ ಸಂಕೇತ ಕೋಟಿ ಚೆನ್ನಯರ ಆರಾಧನಾಲಯಗಳ ನೆರವಿಗೆ ಅಡೆ, ತಡೆಗಳಿಲ್ಲ ಎಂದರು. ರಾಜ್ಯದಲ್ಲಿ ಒಟ್ಟು 55 ಕೋಟಿ ರೂಗಳನ್ನು ದೇವಸ್ಥಾನಗಳ ಅಭಿವೃದ್ಧಿಗೆಂದೇ ಮಂಜೂರುಗೊಳಿಸಿರುವುದಾಗಿ ಧಾರ್ಮಿಕ ದತ್ತಿ ಸಚಿವರೂ ಆದ ಕೋಟ ಈ ಸಂದರ್ಭ ಮಾಹಿತಿ ನೀಡಿದರು.
ಆಶೀರ್ವಚನ ನೀಡಿದ ಶ್ರೀರಾಮ ಕ್ಷೇತ್ರ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಬಿಲ್ಲವ ಸಮಾಜ ಸಂಘಟಿತರಾಗಿ, ಉತ್ತಮ ಶಿಕ್ಷಣಗಳನ್ನು ಪಡೆದು ಸಮಾಜಕ್ಕೆ ಮಾರ್ಗದರ್ಶಕರಾಗಿ ಮುನ್ನಡೆಯಬೇಕು ಎಂದು ಹೇಳಿದರು. ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ, ಕುಕ್ಕಾಜೆ ಕ್ಷೇತ್ರದ ಶ್ರೀಕೃಷ್ಣ ಗುರೂಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ವಹಿಸಿದ್ದರು. ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ನಿವೃತ್ತ ಡಿವೈಎಸ್ಪಿ ಬಿ.ಕೆ.ಶಿವರಾಮ್, ಆಕಾಶವಾಣಿ ಕಲ್ಬುರ್ಗಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಮಹಿಳಾ ಸಮಿತಿ ರಾಜ್ಯಾಧ್ಯಕ್ಷೆ ಗೀತಾಂಜಲಿ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ಜಯಂತ ನಡುಬೈಲು, ಉದ್ಯಮಿ ಜಯದೀಪ್ ಡಿ. ಸುವರ್ಣ, ಯುವವಾಹಿನಿ ಬಂಟ್ವಾಳ ಅಧ್ಯಕ್ಷ ಇಂದಿರೇಶ್, ಮಾಣಿ ಘಟಕಾಧ್ಯಕ್ಷ ರಮೇಶ್ ಮುಜಲ, ಚಿತ್ರನಟಿ ಚಿರಶ್ರೀ ಅಂಚನ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು, ಗೌರವಾಧ್ಯಕ್ಷರಾದ ರುಕ್ಮಯ ಪೂಜಾರಿ, ಸಂಜೀವ ಪೂಜಾರಿ, ಮಾಯಿಲಪ್ಪ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಜಗದೀಶ ಕೊಯ್ಲ, ಉಪಾಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ, ಚಂದ್ರಹಾಸ ಕರ್ಕೇರ, ಜಯಂತಿ ವಿ.ಪೂಜಾರಿ, ಚೆನ್ನಪ್ಪ ಕೋಟ್ಯಾನ್, ರಾಜೇಶ್ ಬಾಳೆಕಲ್ಲು, ಜತೆ ಕಾರ್ಯದರ್ಶಿಗಳಾದ ಶ್ರೀಧರ ಅಮೀನ್, ಸುಂದರ ಪೂಜಾರಿ, ಆನಂದ ಸಾಲ್ಯಾನ್ ಶಂಭೂರು, ಕೋಶಾಧಿಕಾರಿ ಪ್ರೇಮನಾಥ ಕೆ, ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಜಿಪಂ ಸದಸ್ಯ ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ಸರಕಾರಿ ಶಾಲೆ, ಉಳಿಸಿ ಬೆಳೆಸಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್, ಪ್ರಮುಖರಾದ ಬೇಬಿ ಕುಂದರ್, ರಾಜೇಶ್ ಸುವರ್ಣ, ಯಶವಂತ ಪೊಳಲಿ, ದಿನೇಶ ಸುವರ್ಣ ರಾಯಿ ಹಾಜರಿದ್ದರು. ದಿನೇಶ್ ಸುವರ್ಣ ರಾಯಿ ಮತ್ತು ಮಹೇಶ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಸಮಾವೇಶದ ನಿರ್ಣಯವನ್ನು ಗೋಪಾಲ ಅಂಚನ್ ಆಲದಪದವು ವಾಚಿಸಿದರು. ನಾನಾ ರಂಗಗಳಲ್ಲಿ ದುಡಿಯುವ ಬಿಲ್ಲವ ಸಮುದಾಯದವರನ್ನು ವಿಶೇಷವಾದ ವೇದಿಕೆಯಲ್ಲಿ ಗುರುತಿಸಿ, ಗೌರವಿಸಲಾಯಿತು.
Be the first to comment on "ಬಿಲ್ಲವ ಸಮಾಜ ಪ್ರಗತಿಗೆ ಸಂತರ ಮಾರ್ಗದರ್ಶನ ಅಗತ್ಯ: ಕೋಟ ಶ್ರೀನಿವಾಸ ಪೂಜಾರಿ"