www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
ಬಿಲ್ಲವ ಸಮಾಜಕ್ಕೆ ನಾನಾ ರಂಗಗಳಲ್ಲಿ ಸೂಕ್ತ ಪ್ರಾತಿನಿಧ್ಯ, ಮನ್ನಣೆ ನೀಡಬೇಕು ಎಂದು ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ಬಿಲ್ಲವ ಕಣ್ಮಣಿಗಳ ಅಭಿನಂದನಾ ಸಮಿತಿ, ಬಂಟ್ವಾಳ ತಾಲೂಕಿನ ಬಿಲ್ಲವ ಸಂಘಟನೆಗಳು, ಯುವವಾಹಿನಿ ಬಂಟ್ವಾಳ, ಮಾಣಿ ಘಟಕ ಆಶ್ರಯದಲ್ಲಿ ನಡೆದ ನಮ ಬಿರುವೆರ್ ಐಕ್ಯತಾ ಸಮಾವೇಶದಲ್ಲಿ ನಿರ್ಣಯಿಸಲಾಗಿದೆ.
ಸ್ವಾಗತ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ, ಪ್ರಧಾನ ಕಾರ್ಯದರ್ಶಿ ಜಗದೀಶ ಕೊಯ್ಲ, ಕೋಶಾಧಿಕಾರಿ ಪ್ರೇಮನಾಥ ಕೆ ಅವರ ಪರವಾಗಿ ಗೋಪಾಲ ಅಂಚನ್ ಆಲದಪದವು ನಿರ್ಣಯವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮ್ಮುಖ ವಾಚಿಸಿದರು.
ನಾರಾಯಣಗುರು ಅಧ್ಯಯನ ಪೀಠಕ್ಕೆ ಪ್ರತಿ ವರ್ಷ ಬಜೆಟ್ ನಲ್ಲಿ 5 ಕೋಟಿ ರೂ, ಪ್ರತಿ ತಾಲೂಕಲ್ಲಿ ಬಿಲ್ಲವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿನಿಲಯ, ಪ್ರತಿ ಲೋಕಸಭೆ, ವಿಧಾನಸಭೆ ರಾಜಕೀಯ ಪ್ರಾತಿನಿಧ್ಯ, ಅಕಾಡಮಿ, ನಿಗಮ, ಮಂಡಳಿಗೆ ಸೂಕ್ತ ಸ್ಥಾನಮಾನ, ತುಳು ಭಾಷೆ 8ನೇ ಪರಿಚ್ಛೇದಕ್ಕೆ, ಗಡಿ ಪ್ರಧಾನರಾಗಿ ಸೇವೆ ಸಲ್ಲಿಸುವ ಹಿರಿಯರ ಜೀವನಕ್ಕೆ ವಿಶೇಷಾಧಿಕಾರ, ಬಿಲ್ಲವ ಜಾತಿ, ಉಪಜಾತಿಗಳ ಸಮಗ್ರ ಅಭಿವೃದ್ಧಿಗೆ ಸಕಾರಾತ್ಮಕ ಕ್ರಮಕ್ಕೆ ನಿರ್ಣಯದಲ್ಲಿ ಒತ್ತಾಯಿಸಲಾಯಿತು.
ಶ್ರೀರಾಮ ಕ್ಷೇತ್ರ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ,. ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ, ಕುಕ್ಕಾಜೆ ಕ್ಷೇತ್ರದ ಶ್ರೀಕೃಷ್ಣ ಗುರೂಜಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ನಿವೃತ್ತ ಡಿವೈಎಸ್ಪಿ ಬಿ.ಕೆ.ಶಿವರಾಮ್, ಆಕಾಶವಾಣಿ ಕಲ್ಬುರ್ಗಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಮಹಿಳಾ ಸಮಿತಿ ರಾಜ್ಯಾಧ್ಯಕ್ಷೆ ಗೀತಾಂಜಲಿ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ಜಯಂತ ನಡುಬೈಲು, ಉದ್ಯಮಿ ಜಯದೀಪ್ ಡಿ. ಸುವರ್ಣ, ಯುವವಾಹಿನಿ ಬಂಟ್ವಾಳ ಅಧ್ಯಕ್ಷ ಇಂದಿರೇಶ್, ಮಾಣಿ ಘಟಕಾಧ್ಯಕ್ಷ ರಮೇಶ್ ಮುಜಲ, ಚಿತ್ರನಟಿ ಚಿರಶ್ರೀ ಅಂಚನ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು, ಗೌರವಾಧ್ಯಕ್ಷರಾದ ರುಕ್ಮಯ ಪೂಜಾರಿ, ಸಂಜೀವ ಪೂಜಾರಿ, ಮಾಯಿಲಪ್ಪ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಜಗದೀಶ ಕೊಯ್ಲ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ, ಮನ್ನಣೆ: ಸಮಾವೇಶದಲ್ಲಿ ನಿರ್ಣಯ"