ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಏಳನೇ ವರ್ಷದ ಸತ್ಯ–ಧರ್ಮ ಜೋಡುಕರೆ ಬಯಲು ಕಂಬಳ ಶನಿವಾರ ನಡೆಯಿತು.
ಪ್ರಗತಿಪರ ಕೃಷಿಕ ರವೀಂದ್ರ ಅಡಪ ದಿಡಿಂಬಿಲ ಅವರು ಕಂಬಳದ ಕರೆಯನ್ನು ಉದ್ಘಾಟಿಸಿ ಕಂಬಳಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಹಾಗೂ ಕಂಬಳ ಕೋಣಗಳ ಯಜಮಾನ ಸುರೇಶ್ ಶೆಟ್ಟಿ ಮಿಯ್ಯಾರು ಉದ್ಘಾಟಿಸಿದರು. ಉಪ್ಪಿನಂಗಡಿ ದಂತ ವೈದ್ಯ ಡಾ.ರಾಜಾರಾಂ ಅಧ್ಯಕ್ಷತೆ ವಹಿಸಿದ್ದರು.
ಸತ್ಯ ಧರ್ಮ ಕಂಬಳ ಸಮಿತಿ ಅಧ್ಯಕ್ಷ ರವಿ ಕಕ್ಯಪದವು, ಕಂಬಳ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ, ಸತ್ಯ ಧರ್ಮ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಮಹೇಂದ್ರ ಕಾಯರ್ಗುರಿ, ಕೋಶಾಧಿಕಾರಿ ಉಮೇಶ್ ಪೂಜಾರಿ, ಗೆಳೆಯರ ಬಳಗದ ಪದಾಧಿಕಾರಿಗಳಾದ ನ್ಯಾಯವಾದಿ ರಂಜಿತ್ ಮೈರ, ಪುರುಷೋತ್ತಮ ಪಲ್ಕೆ, ಕುಸುಮಾಧರ ಉರ್ಕಿ, ಪ್ರಮುಖರಾದ ಚಿದಾನಂದ ರೈ, ಗಂಗಾಧರ ಪೂಜಾರಿ ಕಜೆಕಾರು, ಪ್ರವೀಣ್ ಶೆಟ್ಟಿ ಕಿಂಜಾಲು, ಸುಧಾಕರ ಶೆಟ್ಟಿ ಶಂಕರಬೆಟ್ಟು, ಪ್ರದೀಪ್, ದಿನೇಶ್ ಪೂಜಾರಿ ಕುಕ್ಕಾಜೆ, ಶಿವಪ್ಪ ಪೂಜಾರಿ ಜೇಡರಬೆಟ್ಟು, ಸುಂದರ ಪೂಜಾರಿ ಕೊಲೆಂಜಿರಕೊಡಿ, ಜಯ ಪೂಜಾರಿ ಕುಕ್ಕಾಜೆ, ಮಹಮ್ಮದ್, ಯೋಗೀಶ್ ಪೂಜಾರಿ, ರಫೀಕ್ ಬನತ್ತಪಲ್ಕೆ, ಶಾಂತಪ್ಪ ಪೂಜಾರಿ ಹಟದಡ್ಕ, ದಯಾನಂದ ಮುಂಡ್ರೇಲು, ಲಿಂಗಪ್ಪ ಗೌಡ ಮಹಮ್ಮಾಯಿ, ಪ್ರಶಾಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಶಿವಾನಂದ ಮೈರ ಸ್ವಾಗತಿಸಿದರು. ಪ್ರಶಾಂತ ಮೈರ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆಗೆ ಮುನ್ನ ಮೈರ ಶ್ರೀ ರಾಮಾಂಜನೇಯ ಭಜನ ಮಂದಿರದಿಂದ ಬರ್ಕೆಜಾಲು ವರೆಗೆ ಮೆರವಣಿಗೆ ನಡೆಯಿತು.
ಸಚಿವ ಕೋಟ ಭೇಟಿ, ಸನ್ಮಾನ:
ಸಂಜೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತಿತರರು ಭೇಟಿ ನೀಡಿದರು. ಈ ಸಂದರ್ಭ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಬಂಟ್ವಾಳನ್ಯೂಸ್ ಸಂಪಾದಕ: ಹರೀಶ ಮಾಂಬಾಡಿ ಸುದ್ದಿ ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
Be the first to comment on "ಕಕ್ಯಪದವು ಮೈರ ಬರ್ಕೆಜಾಲುವಿನಲ್ಲಿ ಸತ್ಯ-ಧರ್ಮ ಕಂಬಳ"