ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶ್ರೀರಾಮ ಪದವಿ ಕಾಲೇಜು ದಶಮಾನೋತ್ಸವ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ, ಎಂ.ಆರ್.ಪಿ.ಎಲ್. ಮಂಗಳೂರು, ಮಹಿಮಾ ಫೌಂಡೇಶನ್ ರಿ. ಬಂಟ್ವಾಳ ಆಶ್ರಯದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಯುವ ಉದ್ಯೋಗಾಕಾಂಕ್ಷಿಗಳ ಸೇವಾ ಕೇಂದ್ರ ಸಹಯೋಗದೊಂದಿಗೆ ಬೃಹತ್ ಉದ್ಯೋಗ ಮೇಳಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಊರಿನಲ್ಲೇ ಉದ್ಯೋಗದಾತರೊಂದಿಗೆ ಮುಖಾಮುಖಿಗೆ ಇಲ್ಲಿ ಅವಕಾಶವಿದ್ದು, ಜನಸಾಮಾನ್ಯರ ನಿರುದ್ಯೋಗ ನಿವಾರಣೆಗೆ ಇದು ಪ್ರೇರಣೆ, ಉದ್ಯೋಗಾವಕಾಶ ಸೃಷ್ಟಿಗೆ ಸಹಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗ್ರಾಮೀಣ ಪ್ರದೇಶದ ಜನರ ಉದ್ಯೋಗಾವಶ್ಯಕತೆಗಳನ್ನು ಈಡೇರಿಸಲು ಕಂಪನಿಗಳು, ಮಳಿಗೆಗಳು ಮುಂದೆ ಬಂದಿರುವುದು ಆಶಾದಾಯಕ ಎಂದರು.
ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ತಾಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮೀ ಗೋಪಾಲಾಚಾರ್ಯ, ಬಾಳ್ತಿಲ ಗ್ರಾಪಂ ಅಧ್ಯಕ್ಷ ವಿಠಲ ನಾಯ್ಕ, ಲಯನ್ಸ್ 317 ಡಿ 1ನೇ ಉಪರಾಜ್ಯಪಾಲ ಡಾ. ಗೀತ್ ಪ್ರಕಾಶ್, 2ನೇ ಉಪರಾಜ್ಯಪಾಲ ವಸಂತಕುಮಾರ್ ಶೆಟ್ಟಿ, ವಲಯಾಧ್ಯಕ್ಷ ಸುಧಾಕರ ಆಚಾರ್ಯ, ಸಂಯೋಜಕ ಲಕ್ಷ್ಮಣ ಕುಲಾಲ್ ಅಗ್ರಬೈಲು, ಮಹಿಮಾ ಫೌಂಡೇಶನ್ ನ ಅಧ್ಯಕ್ಷ ಜಗದೀಶ್.ಬಿ. ಎಸ್, ಉಮೇಶ್ ಆಚಾರ್ಯ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ದಯಾನಂದ, ಶ್ರೀರಾಮ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಲಯನ್ಸ್ ಜಿಲ್ಲಾ ಸಂಯೋಜಕ ದಾಮೋದರ ಬಿ.ಎಂ., ಕಾರ್ಯದರ್ಶಿ ರಾಧಾಕೃಷ್ಣ ಬಂಟ್ವಾಳ, ಉಮೇಶ್ ಸಾಲಿಯಾನ್ ಉಪಸ್ಥಿತರಿದ್ದರು. ಲಯನ್ಸ್ ಬಂಟ್ವಾಳ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೇಲ್ಕಾರ್ ಸ್ವಾಗತಿಸಿದರು. ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ವಂದಿಸಿದರು. ಕವಿತಾ ಕಾರ್ಯಕ್ರಮ ನಿರೂಪಿಸಿದರು.
1500 ಉದ್ಯೋಗಾಕಾಂಕ್ಷಿಗಳು:
ಉದ್ಯೋಗ ಮೇಳದಲ್ಲಿ ಸುಮಾರು 51ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿದ್ದು, 1500 ಉದ್ಯೋಗಾಕಾಂಕ್ಷಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದರು. ಎಸ್.ಎಸ್.ಎಲ್.ಸಿ, ಐಟಿಐ, ಪದವಿ ಪಡೆದ ವಿದ್ಯಾರ್ಥಿಗಳಷ್ಟೇ ಅಲ್ಲ, ಎಂ.ಟೆಕ್, ಬಿಇ ಪದವಿ ಪಡೆದವರೂ ಭಾಗವಹಿಸಿದ್ದರು. ಕೆಲವೆಡೆ ಸ್ಥಳದಲ್ಲೇ ನೇಮಕಾತಿ ಇದ್ದರೆ, ಉಳಿದಂತೆ ಸಂದರ್ಶನ ನಡೆಸಿ ಮಾಹಿತಿ ನೀಡುವುದಾಗಿ ತಿಳಿಸಲಾಯಿತು.
www.bantwalnews.com Editor: Harish Mambady For news and advertisements contact 9448548127
Be the first to comment on "ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ"