ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಪಾಣೆಮಂಗಳೂರು ಶಾರದಾ ಪ್ರೌಢಶಾಲೆ ಹಾಗೂ ಎಸ್‌ಎಲ್‌ಎನ್‌ಪಿ ವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಎರಡು ದಿನಗಳ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ 2019 ಆರಂಭಗೊಂಡಿತು. ಎರಡು ದಿನಗಳ ಕಾಲ ನಡೆಯಲಿರುವ ಕಲೋತ್ಸವದಲ್ಲಿ ಸುಮಾರು 50 ಸ್ಪರ್ಧೆಗಳು ನಡೆಯಲಿದೆ.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ತೋರ್ಪಡಿಸಲು ಇಂತಹ ಕಾರಂಜಿಗಳು ಪ್ರಾಥಮಿಕ ಹಂತದ ವೇದಿಕೆಯಾಗಿದ್ದು, ಪ್ರತಿಯೊಬ್ಬರೂ ಪ್ರತಿಭಾನ್ವೇಷಣೆಯ ಕಾರ್ಯದಲ್ಲಿ ಯಶಸ್ಸು ಕಾಣುವಂತಾಬೇಕು ಎಂದು ಹೇಳಿದರು.
ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಎಲ್ಲ ಪ್ರತಿಭೆಗಳು ಸಮಾಜದ ಶಕ್ತಿಯಾಗಿ ಬೆಳೆಯಲು ವಿದ್ಯಾರ್ಥಿಗಳು ಇಚ್ಛಾಶಕ್ತಿ ಯನ್ನು ಬೆಳೆಸಿಕೊಳ್ಳುವಂತೆ ಹೇಳಿದರು.
ತಾ.ಪಂ.ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಆಲಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಮಮತಾ ಗಟ್ಟಿ, ರವೀಂದ್ರ ಕಂಬಳಿ, ಮಂಜುಳಾ ಮಾಧವ ಮಾವೆ, ಪುರಸಭಾ ಸದಸ್ಯ ಅಬೂಬಕರ್ ಸಿದ್ದೀಕ್, ಶಾರದಾ ಪ್ರೌಢಶಾಲೆಯ ಸಂಚಾಲಕ ವೇದಮೂರ್ತಿ ಎಂ.ಜನಾರ್ಧನ ವಾಸುದೇವ ಭಟ್ ಮಾತನಾಡಿ ಕಲೋತ್ಸವಕ್ಕೆ ಶುಭಹಾರೈಸಿದರು. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಎಸ್‌ಎಲ್‌ಎನ್‌ಪಿ ವಿದ್ಯಾಲಯದ ಸಂಚಾಲಕ ಸುಬೋದ್ ಜಿ.ಪ್ರಭು, ಶಿಕ್ಷಣ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್, ಯುವಜನ ಸಬಲೀಕರಣ ಕ್ರೀಡಾಧಿಕಾರಿ ನವೀನ್ ಪಿ.ಎಸ್, ವಿವಿಧ ಶಿಕ್ಷಕ ಸಂಘಟನೆಗಳ ಪ್ರಮುಖರಾದ ಶಿವಪ್ರಸಾದ್ ಶೆಟ್ಟಿ, ಜೋಯಲ್ ಲೋಬೋ, ಬಿ.ಕೆ.ಭಂಡಾರಿ, ಮುರಳಿಧರ, ಚಿನ್ನಪ್ಪ, ಸುಬ್ರಾಯ ಕಾಮತ್, ಶಾರದಾ ಪ್ರೌಢಶಾಲಾ ಮುಖ್ಯಗುರು ಭೋಜ, ಎಸ್‌ಎಲ್‌ಎನ್‌ಪಿ ಮುಖ್ಯ ಶಿಕ್ಷಕಿ ರಮಾ ಎಸ್. ಭಂಡಾರಿ ಉಪಸ್ಥಿತರಿದ್ದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಸ್ವಾಗತಿಸಿದರು. ನೋಡಲ್ ಅಧಿಕಾರಿ ಸುಶೀಲಾ ವಂದಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ತಾಲೂಕು ಪಂಚಾಯತ್ ವತಿಯಿಂದ ಕ್ರೀಡಾ ವಿದ್ಯಾರ್ಥಿಗಳಿಗೆ ನೀಡಲಾದ ಸಮವಸ್ತ್ರವನ್ನು ಅನಾವರಣಗೊಳಿಸಲಾಯಿತು.
Be the first to comment on "ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಉದ್ಘಾಟನೆ"