ಬಂಟ್ವಾಳ ತಾಲೂಕಿನ ಹೃದಯಭಾಗ ಬಿ.ಸಿ.ರೋಡಿನ ಕೈಕುಂಜೆ ರಸ್ತೆಯ ಮೆಸ್ಕಾಂ ಎದುರಿನಿಂದ ಅಲೆತ್ತೂರು ರಸ್ತೆಯಲ್ಲಿ ಅರ್ಧ ಕಿ.ಮೀ. ದೂರದಲ್ಲಿ ವಿಶಾಲವಾದ ಜಾಗದಲ್ಲಿ ಆರಂಭಗೊಂಡ ಶಟಲ್ ಒಳಾಂಗಣ ಕ್ರೀಡಾಂಗಣ ಜಿ.ಬಿ.ಎಚ್.ಪಿ. ಶಟಲ್ ಅಕಾಡೆಮಿಯನ್ನು ಬಂಟ್ವಾಳ ಶಾಸಕ ರಾಜೇಶ್ ಯು.ನಾಯ್ಕ್ ಶಟಲ್ ಬ್ಯಾಡ್ಮಿಂಟನ್ ಆಡುವ ಮೂಲಕ ಭಾನುವಾರ ಸಂಜೆ ಉದ್ಘಾಟಿಸಿದರು.
ಸ್ಪೋರ್ಟ್ಸ್ ಗೆ ಸಂಬಂಧಿಸಿದ ಒಳಾಂಗಣ ಕ್ರೀಡೆಗಾಗಿ ಸುಸಜ್ಜಿತವಾದ ಸಂಸ್ಥೆಯ ಅಗತ್ಯ ಬಂಟ್ವಾಳಕ್ಕಿದ್ದು, ಭವಿಷ್ಯದಲ್ಲಿ ಬಂಟ್ವಾಳಕ್ಕೆ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಯೋಜನೆ ಇದೆ ಎಂದು ಹೇಳಿದ ಶಾಸಕ, ಕ್ರೀಡಾಂಗಣ ನಿರ್ಮಿಸಿದ ಯುವ ಉದ್ಯಮಿ ಶ್ರೀನಾಥ್ ಅವರನ್ನು ಅಭಿನಂದಿಸಿದರು. ಪುರಸಭೆ ಸದಸ್ಯ ಅರಳ ಗೋವಿಂದ ಪ್ರಭು ಸಹಿತ ಪ್ರಮುಖರು ಉಪಸ್ಥಿತರಿದ್ದು ಶುಭ ಹಾರೈಸಿದರು. ಸಂಸ್ಥೆಯ ಬಿ.ಎನ್. ಶ್ರೀನಾಥ್ ಮತ್ತು ಅಮೃತಾ ಹಾಗೂ ಎನ್. ಹರಿಶ್ಚಂದ್ರ ಭಟ್, ಗಂಗಾ ಭಾಗೀರಥಿ ಅತಿಥಿಗಳನ್ನು ಗೌರವಿಸಿದರು.
- ಎಲ್ಲ ವಯೋಮಾನದ ಕ್ರೀಡಾಸಕ್ತರಿಗೆ ಇಲ್ಲಿದೆ ಅವಕಾಶ.
- ಬಿಡುವಿನ ವೇಳೆಯ ಸದ್ವಿನಿಯೋಗಕ್ಕೆ ಇದು ಪೂರಕ.
- 5200 ಚದರ ಅಡಿ ವಿಸ್ತೀರ್ಣದಿಂದ ಇದು ಕೂಡಿದೆ.
- ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಲ್ಪಟ್ಟ ಶಟಲ್ ಬ್ಯಾಡ್ಮಿಂಟನ್ ಕೋರ್ಟ್
- ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ, ಕ್ರೀಡಾಸಕ್ತರಿಗೆ ಇಲ್ಲಿ ಅವಕಾಶ.
- ಸಮಯದ ಹೊಂದಾಣಿಕೆಗೆ ಅನುಕೂಲವಾಗುವಂತೆ ಕೋರ್ಟನ್ನು ಕಾಯ್ದಿರಿಸಲು ಅವಕಾಶ
- ಪ್ರತಿದಿನ ಬರುವ ಕ್ರೀಡಾಸಕ್ತರಿಗೆ ಪರಿಸರದಲ್ಲೇ ಪಾರ್ಕಿಂಗ್ ವ್ಯವಸ್ಥೆ.
- ಉತ್ತಮ ರಸ್ತೆಯ ವ್ಯವಸ್ಥೆ.
- ಹೆಚ್ಚಿನ ಮಾಹಿತಿಗೆ ಶ್ರೀನಾಥ್ 9036232309 ಸಂಪರ್ಕಿಸಬಹುದು.
Be the first to comment on "ಶಟಲ್ ಆಡುವ ಮೂಲಕ ಜಿ.ಬಿ.ಎಚ್.ಪಿ. ಶಟಲ್ ಅಕಾಡೆಮಿ ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್"