ಬಂಟ್ವಾಳ, ಬಿ.ಸಿ.ರೋಡಿನ ಶಟಲ್ ಆಟದ ಆಸಕ್ತರಿಗೆ ಇದು ಸಿಹಿ ಸುದ್ದಿ. ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಹೃದಯಭಾಗ ಬಿ.ಸಿ.ರೋಡಿನಲ್ಲಿ ಸ್ಪೋರ್ಟ್ಸ್ ಗೆ ಸಂಬಂಧಿಸಿದ ಒಳಾಂಗಣ ಕ್ರೀಡೆಗಾಗಿ ಸುಸಜ್ಜಿತವಾದ ಸಂಸ್ಥೆಯೊಂದು ಅಕ್ಟೋಬರ್ 6ರಂದು ಅಲೆತ್ತೂರಿನಲ್ಲಿ ಆರಂಭಗೊಳ್ಳಲಿದೆ. ಜಿ.ಬಿ.ಎಚ್.ಪಿ. ಶಟಲ್ ಅಕಾಡೆಮಿ ಅಕ್ಟೋಬರ್ 6ರಂದು ಸಂಜೆ 4 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಎನ್. ಹರಿಶ್ಚಂದ್ರ ಭಟ್ ಮತ್ತು ಗಂಗಾ ಭಾಗೀರಥಿ ಉದ್ಘಾಟಿಸುವ ಈ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ಪುರಸಭೆ ಸದಸ್ಯ ಅರಳ ಗೋವಿಂದ ಪ್ರಭು ಭಾಗವಹಿಸಲಿದ್ದಾರೆ ಎಂದು ಬಿ.ಎನ್. ಶ್ರೀನಾಥ್ ಮತ್ತು ಅಮೃತಾ ತಿಳಿಸಿದ್ದಾರೆ. ಬಿ.ಸಿ.ರೋಡಿನಲ್ಲಿ ಶಟಲ್ ಪ್ರಿಯರು ಬಯಸುತ್ತಿದ್ದ INDOOR STADIUM ಕೊರತೆಯೂ ಇದರಿಂದ ನೀಗಲಿದೆ.
ಎಲ್ಲಿದೆ ದಾರಿ:
ಅಲೆತ್ತೂರು ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಬಳಿಯಿಂದ ಕೈಕುಂಜ ರಸ್ತೆಯ ಪಕ್ಕ ಅರ್ಧ ಕಿ.ಮೀ.ನಲ್ಲಿ ದೊರಕುತ್ತದೆ. ಬಹುಮಹಡಿ ವಾಣಿಜ್ಯ ಸಂಕೀರ್ಣಗಳೇ ತಲೆ ಎತ್ತುತ್ತಿರುವ ಇಂದಿನ ದಿನದಲ್ಲಿ ಕ್ರೀಡಾಸಕ್ತರು ಜಾಗ ಹುಡುಕಾಡಬೇಕಾದ ಪರಿಸ್ಥಿತಿ ಇತ್ತು. ಇದನ್ನು ನೀಗಿಸುವ ಸಲುವಾಗಿ ಶ್ರೀನಾಥ್ ಇಲ್ಲಿ ಕ್ರೀಡಾಂಗಣ ನಿರ್ಮಿಸುವ ನಿರ್ಧಾರ ಕೈಗೊಂಡಿದ್ದು, ಅದು ಈಗ ನನಸಾಗಿದೆ.
ಏನೇನಿದೆ:
- ಎಲ್ಲ ವಯೋಮಾನದ ಕ್ರೀಡಾಸಕ್ತರಿಗೆ ಇಲ್ಲಿದೆ ಅವಕಾಶ.
- ಬಿಡುವಿನ ವೇಳೆಯ ಸದ್ವಿನಿಯೋಗಕ್ಕೆ ಇದು ಪೂರಕ.
- 5200 ಚದರ ಅಡಿ ವಿಸ್ತೀರ್ಣದಿಂದ ಇದು ಕೂಡಿದೆ.
- ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಲ್ಪಟ್ಟ ಶಟಲ್ ಬ್ಯಾಡ್ಮಿಂಟನ್ ಕೋರ್ಟ್
- ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ, ಕ್ರೀಡಾಸಕ್ತರಿಗೆ ಇಲ್ಲಿ ಅವಕಾಶ.
- ಸಮಯದ ಹೊಂದಾಣಿಕೆಗೆ ಅನುಕೂಲವಾಗುವಂತೆ ಕೋರ್ಟನ್ನು ಕಾಯ್ದಿರಿಸಲು ಅವಕಾಶ
- ಪ್ರತಿದಿನ ಬರುವ ಕ್ರೀಡಾಸಕ್ತರಿಗೆ ಪರಿಸರದಲ್ಲೇ ಪಾರ್ಕಿಂಗ್ ವ್ಯವಸ್ಥೆ.
- ಉತ್ತಮ ರಸ್ತೆಯ ವ್ಯವಸ್ಥೆ.
- ಹೆಚ್ಚಿನ ಮಾಹಿತಿಗೆ ಶ್ರೀನಾಥ್ 9036232309 ಸಂಪರ್ಕಿಸಬಹುದು.
www.bantwalnews.com Editor: Harish Mambady For Advertisements Contact: 9448548127
Be the first to comment on "ಶಟಲ್ ಪ್ರಿಯರಿಗೆ ಸಿಹಿ ಸುದ್ದಿ: G.B.H.P. ಶಟಲ್ ಅಕಾಡೆಮಿ ಅಕ್ಟೋಬರ್ 6ರಿಂದ ಶುಭಾರಂಭ"