
ಕಾಂಗ್ರೆಸ್ ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಾಂಧಿ ಜಯಂತಿ ಅಚರಣೆ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆಯಿತು.
ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಹಾತ್ಮಾ ಗಾಂಧೀಜೀಯವರ ಗುಣಗಾನ ಮಾಡಿದರು. ಪರಿಶಿಷ್ಟ ಜಾತಿ ಪಂಗಡದ ಮುಖಂಡದರಾದ ಜನಾರ್ದನ ಚೆಂಡ್ತಿಮರ್ ಪ್ರಸ್ತಾವನೆಗೈದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಮುಖಂಡರಾದ ಮಾಯಿಲಪ್ಪ ಸಾಲಿಯಾನ್, ಜಗದೀಶ್ ಕೊಯಿಲ, ಪುರಸಭಾ ಸದಸ್ಯರಾದ ಗಂಗಾಧರ ಪೂಜಾರಿ, ಹಿರಿಯರಾದ ರಾಮಣ್ಣ ಪೂಜಾರಿ, ವೆಂಕಪ್ಪ ಪೂಜಾರಿ, ಅಮ್ಮು ಅರ್ಬಿಗುಡ್ಡೆ ಹಾಗೂ ಸದಸ್ಯರಾದ ಸಂಜೀತ್ ಪೂಜಾರಿ, ಆಸೀಫ್ ಕಾವಳಕಟ್ಟೆ, ಹಮೀದ್ ಮಾಣಿ ಉಪಸ್ಥಿತರಿದ್ದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀಪ್ ಕುಮಾರ್ ಶೆಟ್ಟಿ ವಂದಿಸಿದರು.
www.bantwalnews.com Editor: Harish Mambady
For Advertisements Contact: 9448548127


Be the first to comment on "ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀ ಜಯಂತಿ ಆಚರಣೆ"