ವೀರಕಂಭ ಗ್ರಾಮದ ಮಂಗಳಪದವು ಯುವಸಂಗಮ ಪಾದೆ ವತಿಯಿಂದ ಉಚಿತ ವೈದ್ಯಕೀಯ, ಕಣ್ಣಿನ ತಪಾಸಣೆ, ಹಾಗೂ ದಂತ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.
ಯುವ ಸಂಗಮ ಪಾದೆ ಮಂಗಳಪದವು, ವೀರಕಂಬ ಗ್ರಾಮ, ಬಂಟ್ವಾಳ ತಾಲ್ಲೂಕು ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಸಹಭಾಗಿತ್ವದಲ್ಲಿ ಯುವ ಸಂಗಮ ಪಾದೆ ದಶಮಾನೋತ್ಸವದ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಂಗಳಪದವು ಅಧ್ಯಕ್ಷ ಮಹಾಲಿಂಗ ಭಟ್ ಉಗ್ಗಪ್ಪಕೋಡಿ ಉದ್ಘಾಟಿಸಿದರು.
ಮಂಗಳೂರು ಅತ್ತಾವರ ಕೆಎಂಸಿ ವೈದ್ಯಾಧಿಕಾರಿ ಮಿಥುನ್, ಮೆಡಿಕಲ್ ಕೋಅರ್ಡಿನೇಟರ್ ಹರ್ಬರ್ಟ್, ಸ್ಥಳೀಯ ವೈದ್ಯ ಗಿರಿಧರ ಭಟ್, ಶುಭ ಹಾರೈಸಿದರು. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಸಂಕಪ್ಪ ಗೌಡ ಕೈಂತಿಲ, ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ನವೀಕರಣ ಸಮಿತಿಯ ಸದಸ್ಯ ಚಂದಪ್ಪ ಟೈಲರ್ ಮಂಗಳಪದವು, ಗಾಯತ್ರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಅಡ್ಯೆಯಿ, ಯುವ ಸಂಗಮ ಪಾದೆ ಅಧ್ಯಕ್ಷ ರಾಮಣ್ಣ ಗೌಡ ಪಾದೆ , ಯುವ ಸಂಗಮ ಪಾದೆ ಸಲಹೆಗಾರರಾಗಿರುವ ಶೀನ ಗೌಡ ಸುಳ್ಯ ಇದ್ದರು. ಈ ಸಂದರ್ಭ 150 ಜನರಿಗೆ ಉಚಿತ ಕನ್ನಡಕ ವಿತರಣೆಯನ್ನು ನಡೆಸಲಾಯಿತು. ಗಣ್ಯ ಪೂಜಾ ಪೂರ್ಣಿಮಾ ಮತ್ತು ವೈಷ್ಣವಿ ಪಾದೆ ಪ್ರಾರ್ಥಿಸಿದರು. ಯತೀಶ್ ಪಾದೆ ಸ್ವಾಗತಿಸಿದರು. ಶ್ರುತಿ ಚೊಕ್ಕಾಡಿ ವಂದಿಸಿದರು. ತ್ರಿವೇಣಿ ಕುದ್ಕೋಳಿ ಕಾರ್ಯಕ್ರಮ ನಿರ್ವಹಿಸಿದರು. ಲೋಹಿತ್ ಕರ್ಮಾಜೆ ಶಿಬಿರವನ್ನು ಸಂಯೋಜಿಸಿದರು. ಸುಮಾರು 400 ಹೆಚ್ಚು ಜನರು ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಮಂಗಳಪದವು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಂಗಳಪದವು, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ನವೀಕರಣ ಸಮಿತಿ ಮಂಗಳಪದವು, ಶಿವಾಜಿ ಫ್ರೆಂಡ್ಸ್ ಮಂಗಳಪದವು ಹಾಗೂ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ಸಹಕಾರ ನೀಡಿದರು.
www.bantwalnews.com Editor: Harish Mambady
For Advertisements Contact: 9448548127
Be the first to comment on "ಯುವಸಂಗಮದಿಂದ ಉಚಿತ ಆರೋಗ್ಯ ಶಿಬಿರ"