ಮೂರ್ತೆದಾರರ ಸೇವಾ ಸಹಕಾರಿ ಸಂಘ ಶಂಭೂರು ೨೦೧೮-೧೯ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ ಬೆಳಿಗ್ಗೆ ಶಂಭೂರಿನ ಕೇಂದ್ರ ಕಚೇರಿ ಆವರಣದಲ್ಲಿ ನಡೆಯಿತು.

ಸಂಘದ ಹಿರಿಯ ಮೂರ್ತೆದಾರ ಸದಸ್ಯರಾದ ಚಂದು ಪೂಜಾರಿ ಕೇದಿಗೆ, ಈಶ್ವರ ಪೂಜಾರಿ ನಾಟಿ, ಈಶ್ವರ ಪೂಜಾರಿ ನೀರಪಾದೆ, ಲೋಕಯ್ಯ ಪೂಜಾರಿ ಕುಂದಾಯಗೋಳಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಾಧವ ಕೆ.ಕರ್ಬೇಟ್ಟು, ನಿರ್ದೇಶಕರುಗಳಾದ ರಾಜೇಶ್ ಶೇಡಿಗುರಿ, ಮೋನಪ್ಪ ಪೂಜಾರಿ ಬೊಂಡಾಲ, ನಾರಾಯಣ ಪೂಜಾರಿ ಕೇದಿಗೆ, ಅಶೋಕ ಆರ್., ಕೃಷ್ಣಪ್ಪ ಪೂಜಾರಿ ಬಾಳ್ತಿಲ, ಉಪಸ್ಥಿತರಿದ್ದರು. ಕಾರ್ಯದರ್ಶಿ ಯೋಗೀಶ್ ಅಮೀನ್ ಸ್ವಾಗತಿಸಿ, ವರದಿ ಮಂಡಿಸಿದರು. ಉಪಾಧ್ಯಕ್ಷ ಮಾಧವ ಕರ್ಬೇಟ್ಟು ವಂದಿಸಿದರು.
www.bantwalnews.com Editor: Harish Mambady
For Advertisements Contact: 9448548127


Be the first to comment on "ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ"