ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ 2018-19ನೇ ಸಾಲಿನಲ್ಲಿ ರೂ. 487 ಕೋಟಿ ವ್ಯವಹಾರ ನಡೆಸಿ 3.03 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸುರೇಶ ಕುಲಾಲ್ ತಿಳಿಸಿದ್ದಾರೆ.
ಬಂಟ್ವಾಳ ಬೈಪಾಸ್ ನಲ್ಲಿರುವ ಬ್ಯಾಂಕಿನ ಕೇಂದ್ರ ಕಛೇರಿಯ ‘ಸಮಾಜ ಸಹಕಾರಿ ಭವನ’ದಲ್ಲಿ ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ. ಸದಸ್ಯರಿಗೆ ಶೇ 22 ರಂತೆ ಡಿವೆಡೆಂಡ್ ನ್ನು ಪ್ರಕಟಿಸಿದರು.
ರೂ. 5.15 ಕೋಟಿ ಪಾಲು ಬಂಡವಾಳ, 135.13 ಕೋಟಿ ಠೇವಣಾತಿಗಳು, 8.71 ಕೋಟಿ ನಿಧಿಯನ್ನು ಹೊಂದಿದೆ.107.07 ಕೋ. ಸಾಲ ವಿತರಿಸಲಾಗಿದ್ದು, ಶೇಕಡ 95.82 ವಸೂಲಾತಿಯಾಗಿರುತ್ತದೆ. ಅಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯನ್ನು ಹೊಂದಿರುತ್ತದೆ ಎಂದರು. ಇದೇ ವೇಳೆ ಬ್ಯಾಂಕಿನ ಫರಂಗಿಪೇಟೆ ಶಾಖೆಯ ಸರಫರಾದ ಪ್ರಭಾಕರ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. 2018-19ನೇ ಸಾಲಿನಲ್ಲಿ ಉತ್ತಮ ಸಾಧನೆಗೈದ ಫರಂಗಿಪೇಟೆ ಶಾಖೆಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಬ್ಯಾಂಕ್ ನ ನಿರ್ದೇಶಕರಾದ ಅರುಣ್ ಕುಮಾರ್, ಪದ್ಮನಾಭ ವಿ, ಜನಾರ್ಧನ ಕುಲಾಲ್, ವಿಶ್ವನಾಥ, ಎಂ. ವಾಮನ ಟೈಲರ್,ವಿ. ವಿಜಯ್ ಕುಮಾರ್, ವಿಜಯಲಕ್ಷ್ಮೀ, ವಿದ್ಯಾ ಉಪಸ್ಥಿತರಿದ್ದರು. ಉಪಾಧ್ಯಕ್ಷವಿಶ್ವನಾಥ ಕೆ.ಬಿ. ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕರಾದ ಭೋಜ ಮೂಲ್ಯರವರು ಗತವರ್ಷದ ವರದಿ, ಲೆಕ್ಕ ಪತ್ರಗಳನ್ನು ಮಂಡಿಸಿದರು. ನಿರ್ದೇಶಕಿ ಜಯಂತಿ ವಂದಿಸಿದರು.
Be the first to comment on "ಬಂಟ್ವಾಳ ಸ.ಸೇ.ಸ.ಬ್ಯಾಂಕ್ 3.03 ಕೋ.ರೂ.ಲಾಭ"