ಪಕ್ಷ ತತ್ವ ಸಿದ್ಧಾಂತ ಪಾಲಿಸಿಕೊಂಡು, ಬಲಿಷ್ಠವಾದ ಬೂತ್ ಸಂಘಟನೆ ಗಟ್ಟಿಯಾದರೆ, ಬಿಜೆಪಿ ಸದೃಢವಾಗಿ ಬೆಳೆಯಲು ಸಾಧ್ಯ ಎಂದು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಹೇಳಿದರು.
ಅನಂತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 208 ಬೂತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಕರಿಂಕ ಜೋಗೊಟ್ಟು ಮನೆಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ಶಾಸಕ ರಾಜೇಶ್ ನಾಯ್ಕ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕ್ಷೇತ್ರದ ಅಗತ್ಯ ಬೇಡಿಕೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದು, ಕಾರ್ಯಕರ್ತರು ಪಕ್ಷಕ್ಕಾಗಿ ಸೇವೆ ಮಾಡುವ ಮೂಲಕ ಪ್ರಧಾನಿ ಆಶಯ ಸಾಕಾರಗೊಳಿಸೋಣ ಎಂದರು.
ಬೂತಿನ ನೂತನ ಅಧ್ಯಕ್ಷರಾಗಿ ನಾಗೇಶ್ ಭಂಡಾರಿ ಕರಿಂಕ ಮರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಪೂಜಾರಿ ಗೋಳಿಕಟ್ಟೆ, ಕಾರ್ಯದರ್ಶಿಗಳಾಗಿ ಶಿವಕುಮಾರ್ ಮಣಿಯಾಣಿ ದೇವಿನಗರ, ಕೇಶವ ಆಚಾರ್ಯ ಸಂಕೇಶ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಸುರೇಶ್ ವಿ.ಎಮ್,ಕೃಷ್ಣಪ್ಪ ಗೌಡ, ಬಾಲಕೃಷ್ಣ ಪೂಜಾರಿ,ಆನಂದ ಭಂಡಾರಿ,ವೆಂಕಟೇಶ ಕೋಟ್ಯಾನ್, ಉಮೇಶ್ ನಿಡ್ಯಾರ, ಸಂಕಪ್ಪ ಕೂಡು ರಸ್ತೆ, ಪ್ರಕ್ಯಾತ್ ಹೆಗ್ಡೆ, ವಸಂತಿ, ಗೀತಾ ಚಂದ್ರಶೇಖರ, ಸುಜಾತ ಬಾಕಿಲ, ಸಂದ್ಯಾ ಆಚಾರ್ಯ, ಶಶಿಕಲಾ ,ಧನಂಜಯ ಗೌಡ, ಹರೀಶ್ ಗೌಡ ಪುಳಿತ್ತಡಿ, ಮೋಹನ್ ಗೋಳಿಕಟ್ಟೆ, ಜನಾರ್ದನ ಆಚಾರ್ಯ ಸಂಕೇಶ, ಅಶೋಕ ಜಿ, ಕಿರಣ್ ಭಂಡಾರಿ, ಚಂದ್ರಿಕಾ ಭಂಡಾರಿ, ರವೀಶ್ ಸಂಕೇಶ, ರವಿ ದೇವಿನಗರ , ಚಂದ್ರಶೇಖರ್ ಬಾಬಣಕಟ್ಟೆ ಅವರನ್ನು ಆಯ್ಕೆ ಮಾಡಲಾಯಿತು. ಉಳಿ ಗ್ರಾಮ ಪಂಚಾಯತ್ ಸದಸ್ಯ ಚಿದಾನಂದ ಶೆಟ್ಟಿ, ಅನಂತಾಡಿ ಪಂಚಾಯತ್ ಅದ್ಯಕ್ಷ ಸನತ್ ಕುಮಾರ್ ಸಂದರ್ಭೋಚಿತವಾಗಿ ಮಾತಾಡಿದರು. ರೈತಮೋರ್ಚದ ಬಂಟ್ವಾಳ ತಾ ಅಧ್ಯಕ್ಷ ತನಿಯಪ್ಪ ಗೌಡ,ಪಂ ಉಪಾಧ್ಯಕ್ಷೆ ಕವಿತಾ ಉಮೇಶ್,ಪಂ ಸದಸ್ಯೆ ವಸಂತಿ ನಾಯ್ಕ್ ಪಕ್ಷದ ಪ್ರಮುಖರಾದ ಚಂದ್ರಶೇಖರ ಕರ್ಕೇರ, ಹಿರಿಯರಾದ ಅಪ್ಪಯ ಪಾಟಾಳಿ ಉಪಸ್ಥಿತರಿದ್ದರು. ನಾಗೇಶ್ ಭಂಡಾರಿ ಸ್ವಾಗತಿಸಿ ಜಯರಾಮ ಆಚಾರಿ ವಂದಿಸಿದರು.
Be the first to comment on "ಬಲಿಷ್ಠ ಬೂತ್ ಸಂಘಟನೆಯಿಂದ ಪಕ್ಷ ಸದೃಢ: ಪ್ರಭಾಕರ ಪ್ರಭು"