
ಇರಾ ಗ್ರಾಮದ ಬಂಟರ ಹಾಗೂ ಕುಲಾಲ ಸಮುದಾಯ ಭವನಗಳಿಗೆ ಸರಕಾರದ ಅನುದಾನಕ್ಕಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮಂಗಳೂರು ಶಾಸಕ ಯು.ಟಿ.ಖಾದರ್ ರವರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಲಾಯಿತು. ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಗ್ರಾಮದ ಪ್ರಮುಖರಾದ ಜಗದೀಶ ಶೆಟ್ಟಿ ಗುತ್ತು, ಚಂದ್ರಹಾಸ ರೈ ಬಾಲಾಜಿ ಬೈಲ್, ಅನಿಲ್ ಕುಮಾರ್ ಸೂತ್ರಬೈಲ್, ಯತಿರಾಜ್ ಶೆಟ್ಟಿ ಸಂಪಿಲ, ಭಾಸ್ಕರ ಕುಲಾಲ್ ಸೂತ್ರಬೈಲ್, ಮೊಯ್ದಿನ್ ಕುಂಞಿ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕಿನ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರವಾಸೋಧ್ಯಮ ಸಂಬಂಧಿಸಿದ ಅನುದಾನಕ್ಕಾಗಿ ರಾಜ್ಯದ ಪ್ರವಾಸೋಧ್ಯಮ ಸಚಿವರಾದ ಸಿ.ಟಿ.ರವಿ ಅವರಿಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಮೂಲಕ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು.
www.bantwalnews.com ಸಂಪಾದಕ: HARISH MAMBADY https://www.facebook.com/BantwalNews/ https://twitter.com/harishamambady


Be the first to comment on "ಇರಾ: ಅನುದಾನ ಕೋರಿ ಸಚಿವರ ಬಳಿ ಶಾಸಕ ಯು.ಟಿ.ಖಾದರ್ ನಿಯೋಗ ಮನವಿ"