ರೈತರ ಸಾಲ ಮನ್ನಾ ಹಣ ಕೂಡಲೇ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಜಿಲ್ಲಾ ಕಾಂಗೇಸ್ ಪ್ರಧಾನ ಕಾರ್ಯದರ್ಶಿ ಯಂ ಚಂದ್ರಶೇಖರ ಪೂಜಾರಿ ಒತ್ತಾಯಿಸಿದ್ದಾರೆ.
ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಾಗ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಘೋಷಣೆಯಲ್ಲಿ ಪ್ರತಿ ಕುಟುಂಬಕ್ಕೆ ತಲಾ ರೂ. ೧,೦೦,೦೦೦ ತಕ್ಷಣ ಸಾಲವನ್ನು ಮನ್ನಾ ಘೋಷಣೆ ಮಾಡಿದ್ದಾರೆ ಹಾಗೂ ರೈತರ ಎಲ್ಲಾ ಸಹಕಾರಿ ಬ್ಯಾಂಕ್ಗಳಲ್ಲಿ ಹಾಗೂ ರಾಷ್ಟ್ರೀಯ ಬ್ಯಾಂಕ್ಗಳಲ್ಲಿರುವ ಎಲ್ಲಾ ಸಾಲಗಳನ್ನು ಹಂತಹಂತವಾಗಿ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಘೋಷಣೆಯಾದ ಹಣದಲ್ಲಿ ಕೆಲವು ರೈತರಿಗೆ ಸಾಲ ಮನ್ನಾ ಸೌಲಭ್ಯ ಸಿಕ್ಕಿದ್ದು, ಇನ್ನೂ ಅರ್ಧಾಂಶದಷ್ಟು ರೈತರು ಸಾಲ ಮನ್ನಾ ಸೌಲಭ್ಯವನ್ನು ಪಡೆಯಬೇಕಾಗಿದೆ. ರೈತರು ಈ ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಕೃಷಿ ಭೂಮಿಯಲ್ಲಿರುವ ಅಡಿಕೆ ಮರ, ತೆಂಗಿನ ಮರ ಬಿರುಗಾಳಿಯಿಂದ ಬಿದ್ದು ನಾಶವಾಗಿರುತ್ತದೆ ಹಾಗೂ ಕೊಳೆ ರೋಗದಿಂದ ಉತ್ಪತ್ತಿ ನಾಶವಾಗಿ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ರೈತರ ಸಾಲ ಮನ್ನಾ ಹಣವನ್ನು ಡಿ.ಸಿ.ಸಿ. ಬ್ಯಾಂಕ್ನಲ್ಲಿ ರೈತರ ಖಾತೆಗಳಿಗೆ ನೇರ ಪಾವತಿ ಮಾಡುವುದಾಗಿ ಎಲ್ಲಾ ರೈತರ ಚಾಲ್ತಿ ಖಾತೆಯನ್ನು ತೆರೆಯಲಾಗಿದೆ. ಆದ ಕಾರಣ ರೈತರ ಸಾಲ ಮನ್ನಾದ ಹಣವನ್ನು ಕೂಡಲೇ ಖಾತೆಗೆ ಜಮಾ ಆಗುವಂತೆ ಶೀಘ್ರ ಕ್ರಮಕೈಗೊಳ್ಳಬೇಕು ಎಂದವರು ಒತ್ತಾಯಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರೋತ್ಸವ ಭಾಷಣದಲ್ಲಿ ರೈತರ ಉತ್ಪತ್ತಿಯನ್ನು ದ್ವಿಗುಣಗೊಳಿಸುವುದಾಗಿ ಘೋಷಿಸಿರುತ್ತಾರೆ. ಅದೇ ರೀತಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ತಾನು ಮುಖ್ಯ ಮಂತ್ರಿ ಪ್ರಮಾಣ ವಚನ ಮಾಡುವಾಗ ರೈತರ ಚಿಹ್ನೆ ಹಸಿರು ಶಾಲು ಹಾಕಿ ಪ್ರಮಾಣ ವಚನ ಸ್ವೀಕರಿಸಿ, ರೈತರ ಹಿತ ಕಾಪಾಡುವುದಾಗಿ ಘೋಷಿಸಿದ್ದಾರೆ. ಆದ ಕಾರಣ ರೈತರ ಸಾಲ ಮನ್ನಾ ಹಣವನ್ನು ಸರಕಾರ ತಕ್ಷಣ ಬಿಡುಗಡೆ ಮಾಡಿ ಬಡ ರೈತರಿಗೆ ಸಹಕಾರಿಯಾಗಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಬ್ಯಾಂಕ್ಗಳ ಮುಂದೆ ಧರಣಿ, ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬರುವ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅಸಹಾಕಾರ ಚಳುವಳಿಯನ್ನು ಮಾಡುವುದಾಗಿ ಘೋಷಿಸಿದ್ದಾರೆ.
Be the first to comment on "ರೈತರ ಸಾಲ ಮನ್ನಾ ಹಣ ಕೂಡಲೇ ಬಿಡುಗಡೆ ಮಾಡಲು ಒತ್ತಾಯ"